ಉದಯವಾಹಿನಿ, ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ನಡೆಯುತ್ತಿರುವ ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳ ಚುನಾವಣೆ ಮತದಾನ ಇಂದು ಬಿರುಸಿನಿಂದ ಸಾಗಿತು.ಆಗ್ನೇಯ, ನೈರುತ್ಯ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರ, ಈಶಾನ್ಯ, ನೈರುತ್ಯ ಮತ್ತು ಬೆಂಗಳೂರು ಪದವೀಧರ ಕ್ಷೇತ್ರಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಶಿಕ್ಷಕರು, ಪದವೀಧರ ಮತದಾರರು ಇಂದು ಬೆಳಿಗ್ಗೆಯಿಂದಲೇ ಆಗಮಿಸಿ ತಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಿತ್ತಿದ್ದುದು ಕಂಡುಬಂದಿತು.

ಬೆಳಿಗ್ಗೆ ಆರಂಭವಾದ ಮತದಾನ ಸಂದರ್ಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಹೊತ್ತು ಕಳೆದಂತೆ ಮತದಾರರ ಸಂಖ್ಯೆ ಮತಗಟ್ಟೆಗೆ ಆಗಮಿಸುತ್ತಿದ್ದುದು ಹೆಚ್ಚಾಗಿದ್ದು ಕಂಡುಬಂದಿತು.ಮತಗಟ್ಟೆಯ ಹೊರಭಾಗದಲ್ಲಿ ತಮ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದೂ ಕೂಡ ಕಂಡುಬಂದಿತು.
ಆಗ್ನೇಯ ಶಿಕ್ಷಕರ ವಿಧಾನಪರಿಷತ್‌ ಚುನಾವಣಾ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಇಲ್ಲಿನ ಚಿಕ್ಕಬಳ್ಳಾಪುರ ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿಯಲ್ಲಿ ನಡೆದ ಮತದಾನದಲ್ಲಿ ಮತದಾರರು ಉತ್ಸುಕತೆಯಿಂದ ಆಗಮಿಸಿ ಮತ ಚಲಾಯಿಸಿದರು. ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್‌‍ ಪಕ್ಷದ ಅಭ್ಯರ್ಥಿ ಟಿ.ಡಿ.ಶ್ರೀನಿವಾಸ್‌‍ ಅವರ ಪರವಾಗಿ ಬೆಂಬಲಿಗರು, ಕಾರ್ಯಕರ್ತರು ಮತದಾರರ ಮನವೊಲಿಸುತ್ತಿದ್ದುದು ಕಂಡುಬಂದಿತು.ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಗೆ ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಮತದಾನ ಮಾಡಿದರು. ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಜೆಡಿಎಸ್‌‍ ಅಭ್ಯರ್ಥಿ ಎಸ್‌‍.ಎಲ್‌.ಬೋಜೇಗೌಡ ಮತದಾನ ನಡೆಯುತ್ತಿರುವ ಬೇಲೂರು ರಸ್ತೆಯಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!