ರವಿ ತೇಲಂಗಿ

ಉದಯವಾಹಿನಿ, ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಹುಲಗಬಾಳ ಗ್ರಾಮದಿಂದ ಅಡವಿ ಹುಲಗಬಾಳ ತಾಂಡಾಕ್ಕೆ ಹೋಗುವ ಸೇತುವೆ ಮುಂಗಾರು ಆರಂಭದ ಬಾರಿ ಮಳೆಗೆ ಒಡೆದು ಸಾರ್ವಜನಿಕ ಸಂಪರ್ಕ ಕಡೆದಿದೆ ಇದು ಮೊದಲ ಬಾರಿ ಏನಲ್ಲಾ ಈ ಸೇತುವೆ ಒಡೆದದ್ದು ಕಳೆದ ವರ್ಷದ ಮಳೆಗೂ ಒಡೆದು ತಾಂಡಾ ನಿವಾಸಿಗಳು ನಡುಗಡ್ಡೆಗೆ ಸಿಲುಕಿದ್ದರು ಮತ್ತೆ ಈಗ ಇದು ಪುನರ್ನಾವರ್ತನೆ ಆಗಿದೆ ಅಷ್ಟೇ ಈ ಸೇತುವೆ ದುರಸ್ತಿ ಸರಿಯಾಗಿ ಮಾಡದ ಕಾರಣ ಮತ್ತೆ ಮತ್ತೆ ಮಳೆಗೆ ಈ ಅವಾಂತರ ಸೃಷ್ಟಿಯಾಗುತ್ತಿದೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಾಗಲಿ ತಾಲೂಕು ಆಡಳಿತ ಸಮಸ್ಯೆ ಶಾಶ್ವತ ಪರಿಹಾರ ನೀಡದೆ ಇದ್ದರೆ ತಹಶಿಲ್ದಾರ ಕಚೇರಿಯ ಮುಂದೆ ಪ್ರತಿಭಟಿಸುವ ಎಚ್ಚರಿಕೆಯನ್ನು ತಾಂಡಾ ನಿವಾಸಿಗಳಾದ ಬಸ್ಸು ಚವ್ಹಾಣ, ಶೇಖಪ್ಪ ಚವ್ಹಾಣ, ಭೀಮಪ್ಪ ರಾಠೋಡ,ನಾರಾಯಣಪ್ಪ ಚವ್ಹಾಣ, ರೂಪಸಿಂಗ್ ಚವ್ಹಾಣ, ಸೋನುಬಾಯಿ ಚವ್ಹಾಣ, ಭೀಮುಬಾಯಿ ಚವ್ಹಾಣ, ಗುರುಬಾಯಿ ರಾಠೋಡ ಎಚ್ಚರಿಕೆ ನೀಡಿದ್ದಾರೆ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೇತುವೆ ದುರಸ್ತಿ ಮಾಡುವಂತೆ ಆಗ್ರಹಪಡಿಸಿದ್ದಾರೆ.

ಮಳೆಗೆ ಡೂಂಕಮಡು ಸೇತುವೆ ಮುಳುಗಡೆ: ಡೂಂಕಮಡು ಮುದ್ದೇಬಿಹಾಳ ಸಂಪರ್ಕ ಸೇತುವೆ ರವಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಸಂಪೂರ್ಣ ಮುಳಗಿದೆ ಇದರಿಂದ ಡೂಂಕಮಡುದಿಂದ ,ಅಡವಿ ಸೋಮನಾಳ, ಮುದ್ದೇಬಿಹಾಳ ಸಂಪರ್ಕ ಕಡಿದಿದೆ ಇದರಿಂದ ಶಾಲಾ ಮಕ್ಕಳಿಗೆ ಗ್ರಾಮಸ್ಥರ ಸಂಚಾರಕ್ಕೆ ಅನಾನುಕೂಲ ಉಂಟಾಗಿದೆ ಪ್ರತಿ ಭಾರಿ ಮಳೆಬಂದಾಗಲೂ ಇದೆ ಪರಿಸ್ಥಿತಿ ರೋಸಿಹೋಗಿರುವ ಗ್ರಾಮದ ದಲಿತ ಮುಖಂಡ ದೇವೇಂದ್ರ ಹೂಸಮನಿ, ದ್ಯಾಮಣ್ಣ ಕೂಡಲಗಿ, ನಿಂಗಪ್ಪ ಚಳ್ಳಗಿ, ನಿಂಗಣ್ಣ ಪೂಜಾರಿ ಬಸವರಾಜ ಜೋಗಂಡಭಾವಿ ಮುತ್ತು ಬಿಂಗೇರಿ ಮುತ್ತು ಕೂಡ್ಲಿಗಿ, ಮತ ಕೇಳಲು ಬರುವ ಜನಪ್ರತಿನಿಧಿಗಳು ಗ್ರಾಮಸ್ಥರ ಸಮಸ್ಯೆ ಏನೆಂದು ಅರಿತು ಪರಿಹಾರ ನೀಡಬೇಕು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೇತುವೆ ಮೇಲ್ದರ್ಜೆಗೆ ಏರಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!