ಉದಯವಾಹಿನಿ, ವಿಜಯಪುರ : ಪಟ್ಟಣದ ಪ್ರಗತಿ ಪ್ರಾಥಮಿಕ ಆಂಗ್ಲ ಶಾಲೆಯ ವತಿಯಿಂದ ಬುಧವಾರದಂದು ಶ್ರೀ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ೫೧ನೇ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಪ್ರಗತಿ ಕೈಗಾರಿಕಾ ತರಬೇತಿಯ ಪ್ರಾಂಶುಪಾಲರಾದ ಹರೀಶ್ ಕುಮಾರ್. ವಿ ಮತ್ತು ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದಂತಹ ಜೆ. ಎನ್. ಪ್ರಕಾಶ್ ರವರು ಹಾಗೂ ಹಿರಿಯ ಶಿಕ್ಷಕ ರಾದ ಎಚ್, ಶಾಂತಮೂರ್ತಿ ರವರು ಹಾಗೂ ಹಲವಾರು ವಿದ್ಯಾರ್ಥಿಗಳು ಗಿಡಕ್ಕೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಗತಿ ಕೈಗಾರಿಕಾ ತರಬೇತಿಯ ಪ್ರಾಂಶುಪಾಲರಾದ ಹರೀಶ್ ಕುಮಾರ್ ವಿ ರವರು ಆಗಮಿಸಿ ಕಾರ್ಯಕ್ರಮದ ಕುರಿತು ಮಾತನಾಡಿ ಮನುಷ್ಯನಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ. ಪೂರ್ಣಚಂದ್ರ ತೇಜಸ್ವಿಯವರ ಸಾಲುಗಳನ್ನು ಮೆಲುಕು ಹಾಕಿದರು.”ಈಗ ಹಚ್ಚ ಹಸಿರಿಲ್ಲದ ಕಾಡು, ಕಾಡು ಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತದೆ”ಎ॒ಂದು ಎಲ್ಲಾ ವಿದ್ಯಾರ್ಥಿಗಳಲ್ಲೂ ಪರಿಸರದ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ಜೆ,ಎನ್.ಪ್ರಕಾಶ್ ವಹಿಸಿದ್ದು, ಈ ಕಾರ್ಯಕ್ರಮದ ಕುರಿತು ಮಾತನಾಡಿ ಮನೆಗೊಂದು ಮರ ಊರಿಗೊಂದು ವನ ಎಂಬ ಧ್ಯೇಯ ವಾಕ್ಯಕ್ಕೆ ಮಹತ್ವವನ್ನು ನೀಡುತ್ತಾ,”ಭೂಮಿಯು ನಮ್ಮ ಮನೆಯಂತಿದೆ ಅದನ್ನು ಸ್ವಚ್ಛವಾಗಿ ಕಾಪಾಡುವುದು ನಿಮ್ಮ ನಮ್ಮೆಲ್ಲರ ಆದ್ಯ ಕರ್ತವ್ಯ. ಎಂಬುದನ್ನು ತಿಳಿಸುತ್ತಾ, ವಿದ್ಯಾರ್ಥಿಗಳು ತಯಾರಿಸಿದ ಸೀಡ್ ಬಾಲ್ ಗಳನ್ನು ಯಾವ ರೀತಿ ಅವುಗಳನ್ನು ಬಳಸಿ ಮರಗಳನ್ನು ಬೆಳಸಬಹುದು ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!