ಉದಯವಾಹಿನಿ, ಕಲಬುರಗಿ: ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಕಾರ್ಯಗಳು ಸುವ್ಯವಸ್ಥಿತವಾಗಿ ನಡೆಯಲು ವಿದ್ಯಾರ್ಥಿಗಳ ಚುನಾವಣೆ ನಡೆಸಲಾಯಿತು.
ಪ್ರತಿಯೊಂದು ವಿಭಾಗಕ್ಕೂ (ಶಾಲೆಯ ನಾಯಕ, ಉಪನಾಯಕ, ಸಾಂಸ್ಕøತಿಕ ವಿಭಾಗ ಆರೋಗ್ಯ, ನೈರ್ಮಲೀಕರಣ ವಿಭಾಗ ಮತ್ತು ಶಿಸ್ತು ವಿಭಾಗ) ವಿದ್ಯಾರ್ಥಿಗಳನ್ನು ಮತ ಚಲಾಯಿಸುವುದರ ಮೂಲಕ ಆಯ್ಕೆ ಮಾಡಲಾಯಿತು.
ಈ ಚುನಾವಣೆಯಲ್ಲಿ ಶಾಲೆಯ ಅಧ್ಯಕ್ಷರಾದ ರಾಮಚಂದ್ರ ಡಿ ರಘೋಜಿ, ಕಾರ್ಯದರ್ಶಿಗಳಾದ ಮೀರಾ ಆರ್ ರಘೋಜಿ, ಟ್ರಸ್ಟೀ ಹೊಂದಿರುವ ಕುಮಾರಿ ನಂದಿನಿ ಆರ್ ರಘೋಜಿ ಮತ್ತು ವಿಷ್ಣು ಖೇಲೋಜಿ, ಪ್ರಾಂಶುಪಾಲರಾದ ಪ್ರಮೋದ ಎಸ್ ಮಳೇಕರ ಸೇರಿದಂತೆ ಬೋಧಕ, ಬೋಧಕೇತರರು, ಶಾಲೆಯ ಮಕ್ಕಳು ಉಪಸ್ಥಿತರಿದ್ದರು. 6ನೇ ತರಗತಿ ಯಿಂದ 10ನೇ ತರಗತಿಯ ವರೆಗಿನ ಎಲ್ಲಮಕ್ಕಳು ಮತ ಚಲಾಯಿಸಿದರು, ಒಟ್ಟು 292 ಮತಗಳಲ್ಲಿ 287 ಜನ ಮತ ಚಲಾಯಿಸಿದರು.

Leave a Reply

Your email address will not be published. Required fields are marked *

error: Content is protected !!