ಉದಯವಾಹಿನಿ, ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣಗೆ ಪಶ್ಚಿಮ ವಿಭಾಗದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.ತಕ್ಷಣವೇ ಕಾಮಾಕ್ಷಿಪಾಳ್ಯ ಠಾಣೆಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ರೇಣುಕಸ್ವಾಮಿ ಕೊಲೆ ನಡೆಯುವುದಕ್ಕೂ ಮೊದಲು ಬಂಧಿತ ಆರೋಪಿ ವಿನಯ್‌ಗೆ ಸೇರಿದ ಸ್ಟೋನಿ ಬ್ರುಕ್ ಹೋಟೆಲ್‌ನಲ್ಲಿ ಪಾರ್ಟಿ ನಡೆದಿತ್ತು.ಪಾರ್ಟಿಯಲ್ಲಿ ದರ್ಶನ್, ವಿನಯ್, ಚಿಕ್ಕಣ್ಣ ಹಾಗೂ ಪವನ್ ಇದ್ದರು ಎನ್ನಲಾಗಿದೆ. ಆಗ ಏನಾದರೂ ಕೃತ್ಯದ ಸಂಬಂಧ ಮಾತುಕತೆ ನಡೆದಿತ್ತೇ ಎಂಬುವುದರ ಕುರಿತು ವಿಚಾರಣೆ ನಡೆಸಲು ಚಿಕ್ಕಣ್ಣಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
