ಉದಯವಾಹಿನಿ, ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅವರನ್ನು ಬಂಧಿಸಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕೇಸ್ಗೆ ಸಂಬಂಧಿಸಿದಂತೆ ದಿನಕ್ಕೊಂದು ಭೀಕರ ಸುದ್ದಿ ಹೊರಬೀಳುತ್ತಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಎನ್ನುವ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಭೀಕರವಾಗಿ ಕೊಲೆಗೈದಿದ್ದಾರೆ. ಶೆಡ್ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟ ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲೆಗೈದಿದ್ರು. ಪವಿತ್ರಾ ಗೌಡ ಮನೆಯಲ್ಲಿ ಇಂದು ಪೊಲೀಸರು ಮಹಜರು ನಡೆಸಿದ್ರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಮೊದಲ ಆರೋಪಿಯ ಆಗಿರುವ ಪವಿತ್ರಾ ಗೌಡ ಅವರ ಮನೆಯಲ್ಲಿಂದು ಪೊಲೀಸರು ಸ್ಥಳ ಮಹಜರು ನಡೆಸಿದ್ರು. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ಜೊತೆ ಮಾತಾಡಿದ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಆರ್. ಆರ್ ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ಬಂದಿದ್ರು. ಪವನ್ ಮತ್ತು ಪವಿತ್ರಾ ಇಬ್ಬರನ್ನು ಕರೆತಂದ ಪೊಲೀಸರು ಗಂಟೆಗಳಿಗೂ ಅಧಿಕ ಕಾಲ ಸ್ಥಳ ಮಹಜರು ನಡೆಸಿದ್ರು.
ಮನೆಯ ಮೂಲೆ ಮೂಲೆಯನ್ನೂ ಜಾಲಾಡಿ ಪೊಲೀಸರು ಅನೇಕ ಸಾಕ್ಷ್ಯಗಳನ್ನ ಸಂಗ್ರಹಿಸಿದ್ರು. ಕೊಲೆಯಾದ ದಿನ ನಟಿ ಪವಿತ್ರಾ ಗೌಡ ಧರಿಸಿದ್ದ ಬಟ್ಟೆಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನ ಪವಿತ್ರಾ ಗೌಡ ಪಟ್ಟಣಗೆರೆ ಶೆಡ್ಗೆ ಹೋಗಿ ಅಲ್ಲಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದು ನೇರವಾಗಿ ಮನೆಗೆ ಹೋಗಿದ್ರು. ಶೆಡ್ಗೆ ಹೋಗುವ ವೇಳೆ ಪವಿತ್ರಾಗೌಡ ಯಾವ ಬಟ್ಟೆ ಶೂ ಧರಿಸಿದ್ರು ಎಂದು ಕೇಳಿ ಎಲ್ಲವನ್ನು ವಶಕ್ಕೆ ಪಡೆದಿದ್ದಾರೆ ನಿವಾಸದಲ್ಲಿದ್ದ ಸಿಸಿಟಿವಿ ಫೂಟೇಜ್ ಗಳನ್ನ ಸಂಗ್ರಹಿಸಿದ್ದಾರೆ. ಪವಿತ್ರಾ ಓಡಾಡುತ್ತಿದ್ದ ಕಾರುಗಳಲ್ಲಿ ತಪಾಸಣೆ ಮಾಡಿದ್ರು.
