ಉದಯವಾಹಿನಿ, ಬೆಂಗಳೂರು: ರಾಷ್ಟ್ರಹಿತವನ್ನು ಬಿಟ್ಟುಕೊಡದೆ ರಾಷ್ಟ್ರಹಿತದ ಹಿನ್ನೆಲೆಯಲ್ಲೇ ಬಿಜೆಪಿ ರಾಜಕಾರಣ ಮಾಡುತ್ತ ಬಂದಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ್ದ ಜಗನ್ನಾಥ ರಾವ್‌ ಜೋಶಿಯವರ ಜನ ದಿನ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಧ್ಯಪ್ರದೇಶದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಗನ್ನಾಥ ರಾವ್‌ ಜೋಶಿ ಅವರು ಕಾರ್ಯಕರ್ತರಿಗೆ ಪ್ರೇರಕರು. ಅವರ ಹೆಸರನ್ನೀ ಈ ಭವನಕ್ಕೂ ಇಟ್ಟಿದ್ದೇವೆ ಎಂದು ವಿವರಿಸಿದರು. ಸಂಘಟಕ, ಮಾರ್ಗದರ್ಶಕರಾಗಿ ಪಕ್ಷದ ರಾಜ್ಯ ಮತ್ತು ದೇಶದ ಸಂಘಟನೆಯ ನಾಯಕತ್ವ ವಹಿಸಿ ಅವರು ಕರ್ನಾಟಕ ಕೇಸರಿ ಎಂಬ ಹೆಸರಿಗೆ ತಕ್ಕಂತೆ ಬದುಕಿದವರು ಎಂದು ತಿಳಿಸಿದರು.
ನರಗುಂದದಲ್ಲಿ ಅವರು ಹುಟ್ಟಿದ ಮನೆಯನ್ನು ಸಾರಕವಾಗಿ ಪರಿವರ್ತನೆ ಮಾಡಲಾಗಿದೆೆ. ಅಲ್ಲಿ ಅವರ ಬದುಕಿನ ಸಂಗತಿಗಳ ಚಿತ್ರಣ ಲಭಿಸುತ್ತದೆ. ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೂ ಅವರ ಜೀವನಾನುಭವ ಸಿಗಲಿ ಎಂದು ಸಾರಕ ಮಾಡಲಾಗಿದೆ ಎಂದು ಹೇಳಿದರು.

ಶ್ಯಾಮಪ್ರಸಾದ ಮುಖರ್ಜಿಯವರು ತಕ್ಕಮಟ್ಟಿನ ಶ್ರೀಮಂತ ಮನೆತನದಲ್ಲಿ ಅವರ ಜನ ಆಗಿತ್ತು. ಕಿರಿಯ ವಯಸ್ಸಿಗೇ ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ ಅವರು ಕೆಲಸ ಮಾಡಿದ್ದರು. ಹಿಂದೂ ಮಹಾಸಭೆಯ ಕಾರ್ಯಕಾರಿ ಅಧ್ಯಕ್ಷ, ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸರಕಾರದಲ್ಲಿ ಸಚಿವರಾಗಿದ್ದರು. ಇವರು ಕೇವಲ ಸುಶಿಕ್ಷಿತ, ವಾಗಿಯಲ್ಲ; ರಾಜನೀತಿ ಕ್ಷೇತ್ರದ ಕುಶಲ ಸಂಘಟಕನೂ ಆಗಿದ್ದು, ಅಪ್ರತಿಮ ರಾಷ್ಟ್ರವಾದಿಯಾಗಿ ಕಾರ್ಯನಿರ್ವಹಿಸಿದವರು ಎಂದು ವಿಶ್ಲೇಷಿಸಿದರು. ರಾಷ್ಟ್ರಹಿತದ ಜೊತೆ ಯಾವತ್ತೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!