ಉದಯವಾಹಿನಿ, ಶಹಾಬಾದ: ಪಟ್ಟಣದ ಶರಣನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಕಸದ ರಾಶಿ ತೆರವುಗೊಳಿಸಲು ನಗರ ಸಭೆ ಕ್ರಮ ಕೈಗೊಳ್ಳಬೇಕು ಎಂದು ಶರಣನಗರ ನಿವಾಸಿಗಳಾದ ರವಿ ಬೆಳಮಗಿ, ಅಶೋಕ ದೇವರಮನಿ, ಬಸವರಾಜ ಜೀವಣಗಿ, ನಿಂಗಣ್ಣ ಮಾಲಗತ್ತಿ, ಮಹ್ಮದ್ ಮುಕ್ಕುಂದ, ಬಾಬು ಸೇಠ, ಮಹ್ಮದ್ ಜಾನಿ, ಮಹ್ಮದ್ದ ಕಖದೀರ, ಶಾಂತಪ್ಪ ಹಳ್ಳಿ, ಮಲ್ಲಪ್ಪ ಮಾಲಗತ್ತಿ, ರಮೇಶ ಅವರಾದಿ ಒತ್ತಾಯಿಸಿದ್ದಾರೆ.
ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿರುವುದಲ್ಲದೆ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ವಿದ್ಯುತ್ ದೀಪ ಅಳವಡಿಸಿಲ್ಲ ಇದರಿಂದಾಗಿ ಇಲ್ಲಿನ ನಾಗರಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದ್ದು, ನಗರ ಸಭೆ ಕಸದ ರಾಶಿ ತೆರವಿಗೆ, ಚರಂಡಿ ಸ್ವಚ್ಛತೆಗೆ ಮತ್ತು ವಿದ್ಯುತ್ ದೀಪ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದು ಮಳೆಗಾಲವಾಗಿರುವುದರಿಂದ ಚರಂಡಿಯಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗಲಿದೆ. ಇದರಿಂದ ಜನ ಡೆಂಗ್ಯೂ, ಚಿಕುನ್ ಗುನ್ಯಾದಂತಹ ಕಾಯಿಲೆಗಳಿಗೆ ತುತ್ತಾಗುವ ಸಂಭವಗಳಿಗೆ. ಆದ್ದರಿಂದ ನಗರ ಸಭೆ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!