ಉದಯವಾಹಿನಿ, ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಗೆಹರಿದಿಲ್ಲ. ಹಲವಡೆ ಮಳೆಯಾಗಿದ್ದರೂ ಕುಡಿಯಲು ಮತ್ತು ಅಡುಗೆ ಮಾಡಲು ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ.ಈ ವರ್ಷ ಬರ ಪರಿಸ್ಥಿತಿಯಿಂದಾಗಿ ನಗರದಲ್ಲಿ ತೀವ್ರ ನೀರಿನ ಬಿಕಟ್ಟು ಸೃಷ್ಟಿಯಾಗಿತ್ತು. ಕಳೆದ ಜೂನ್‌ನಲ್ಲಿ ಮುಂಗಾರು ಮಳೆ ಪ್ರವೇಶಿಸಿದ್ದರೂ ನಗರದಲ್ಲಿ ನೀರಿನ ಬವಣೆ
ಬಗೆಹರಿದಿಲ್ಲ. ನಗರದ ಜನ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದಾರೆ. ನೀರಿನ ಟ್ಯಾಂಕರ್‌ಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಬೆಲಯನ್ನು ವಿಧಿಸುತ್ತಿರುವುದು
ದುರಾದೃಷ್ಟದ ಸಂಗತಿಯಾಗಿದೆ.
ನಗರದ ಹೊರವಲಯದಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವರು ಬೋರ್‌ವೆಲ್‌ಗಳನ್ನ ಅವಲಂಬಿಸಿ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆ
ಯಾಗಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳನ್ನ ನೆಚ್ಚಿಕೊಳ್ಳಬೇಕಿದೆ.
ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯಂತಹ ಪ್ರದೇಶಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದು ಟ್ಯಾಂಕರ್‌ಗಳನ್ನು ನೆಚ್ಚಿಕೊಳ್ಳಬೇಕಿದೆ. ಆದರೆ ಟ್ಯಾಂಕರ್‌ಗಳ ಬೆಲೆ ಹೆಚ್ಚಿದ್ದರಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ೧೨೦೦ ಲೀಟರ್ ಟ್ಯಾಂಕರ್ ನೀರಿಗೆ ೧,೮೦೦ ರೂ. ಪಾವತಿಸುತ್ತಿರುವುದಾಗಿ ಜನ ಹೇಳುತ್ತಿದ್ದಾರೆ. ಸರ್ಕಾರ ಕಡಿವಾಣ ಹಾಕಿದರೂ ಟ್ಯಾಂಕರ್ ಮಾಫಿಯಾ ನಿಂತಿಲ್ಲ. ಕನಕಪುರ ರಸ್ತೆ ಪ್ರದೇಶಗಳ ನಿವಾಸಿಗಳ ಸಂಕಷ್ಟಕ್ಕೆ ಮುಕ್ತಿ ಸಿಕ್ಕಿಲ್ಲ.
