
ಉದಯವಾಹಿನಿ, ತಾಳಿಕೋಟೆ: ರಾಜ್ಯ ಸರ್ಕಾರವು ಜನ ಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುವದರೊಂದಿಗೆ ದಿನಬಳಿಕೆ ವಸ್ತುಗಳಾದ ಪೇಟ್ರೋಲ್, ಡಿಸೇಲ್, ಅಲ್ಲದೇ ಹಾಲಿನ ದರದ ಜೊತೆಗೆ ಎಲ್ಲ ವಸ್ತುಗಳ ಬೆಲೆಯ ಮೇಲೆ ತೆರಿಗೆಯನ್ನು ಹೆಚ್ಚಿಸಿರುವದನ್ನು ಖಂಡಿಸಿ ತಾಳಿಕೋಟೆಯ ಭಾರತೀಯ ಜನತಾ ಪಕ್ಷದ ನಗರ ಘಟಕದ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರರಂದು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರೂದ್ದ ಆಕ್ರೋಶ ಹೊರ ಹಾಕಿದರು.
ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ದಿನಬಳಿಕೆ ವಸ್ತುಗಳ ಬೆಲೆ ರಾಜ್ಯ ಸರ್ಕಾರವು ಹೆಚ್ಚಿಸುತ್ತಾ ಸಾಗಿದೆ ಬಡಬಗ್ಗರು ಜೀವನ ನಡೆಸುವದೇ ದುಸ್ಥರವೆಂಬಂತಾಗಿದೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪೇಟ್ರೋಲ್, ಡಿಸೇಲ್ ಬೆಲೆಯನ್ನು ಎರಡುಭಾರಿ ಎಚ್ಚಿಸಿದೆ ಮತ್ತು ಕಳೆದ ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹದ ಹೆಚ್ಚಿಸುತ್ತೇವೆಂದು ಹೇಳಿ ಕಳೆದ 3 ತಿಂಗಳ ಹಿಂದೆ ಬೆಲೆ ಏರಿಸಿದ್ದಾರೆ ಮತ್ತೇ ಈಗ ಹಾಲಿನ ದರವನ್ನು ಹೆಚ್ಚಿಸಿ ಗ್ಯಾರೆಂಟಿ ಹೊಟ್ಟೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆಂದು ಆರೋಪಿಸಿದ ಅವರು ರಾಜ್ಯ ಸರ್ಕಾರದಿಂದ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮಹಿಳೆಯರಿಗೆ ಒಂದು ಕಡೆ ಕೊಟ್ಟಂತೆ ಮಾಡಿ ಪುರುಷರಿಂದ ಇನ್ನೊಂದು ಕೈಯಿಂದ ಕಸಿದುಕೊಳ್ಳುವಂತಹ ಕಾರ್ಯ ನಡೆಸಿದ್ದಾರೆ. ಮನೆಗಳಿಗೆ ವಿದ್ಯುತ್ ಉಚಿತವಾಗಿ ನೀಡುತ್ತಿದ್ದೇವೆಂದು ಹೇಳುವ ಮುಖ್ಯಮಂತ್ರಿಗಳು ವಿದ್ಯುತ್ ದರವನ್ನು ಹೆಚ್ಚಿಸಿ ಮತ್ತೊಂದು ಕಡೆಯಿಂದ ಜನರಿಂದ ವಸೂಲಿಗೆ ಇಳಿದಿದೆ ತಾಳ ಮೇಳ ವಿಲ್ಲದ ರಾಜ್ಯ ಕಾಂಗ್ರೇಸ್ ಸರ್ಕಾರವು ಬಡ ಬಗ್ಗರ ಸರ್ಕಾರವಾಗದೇ ಬಡವರಿಂದ ಕಿತ್ತೂ ತಿನ್ನುವ ಸರ್ಕಾರವಾಗಿದೆ ಎಂದು ಆರೋಪಿಸಿದ ಅವರು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ ಬಗ್ಗರ ದಿನಬಳಿಕೆ ವಸ್ತುಗಳ ಬೆಲೆ ಹೆಚ್ಚಿಸಿರುವದನ್ನು ಇಳಿಸಬೇಕು ಇಲ್ಲದಿದ್ದರೆ ಬಿಜೆಪಿ ನೇತೃತ್ವದಲ್ಲಿ ನಿರಂತರ ಪ್ರತಿಭಟನೆ ರಾಜ್ಯದಲ್ಲಿ ನಡೆಯಲಿದೆ.
