ಉದಯವಾಹಿನಿ, ತುಮಕೂರು: ನಗರದ ರೈಲು ನಿಲ್ದಾಣದಲ್ಲಿ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಎರಡುಮೂರು ದಿನದ ಹಸುಗಾಸಾಗಿದ್ದು, ನಿನ್ನೆ ರಾತ್ರಿ 9.30ರಲ್ಲಿ ತುಮಕೂರು ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು , ಇದನ್ನು ಕಂಡು ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಕಳುಹಿಸಲಾಗಿದೆ. ನಿನ್ನೆಯಷ್ಠೇ ಮಕ್ಕಳಾ ಮಾರಾಟ ಜಾಲವನ್ನ ಭೇದಿಸಿದ್ದ ತುಮಕೂರು ಪೊಲೀಸರು ಒಂದೇ ಗ್ಯಾಂಗ್‌ನ 7 ಜನರನ್ನುಬಂಧಿಸಿದ್ದರು. ಈ ಬೆನ್ನಲ್ಲೆ ರೈಲ್ವೆ ನಿಲ್ದಾಣದಲ್ಲಿ ಹಸುಗೂಸುವಿನ ಶವ ಪತ್ತೆಯಾಗಿದೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರಿದಿದೆ.

 

Leave a Reply

Your email address will not be published. Required fields are marked *

error: Content is protected !!