ಉದಯವಾಹಿನಿ, ತಿರುಪತಿ: ಶ್ರೀವಾರಿ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳೂ ಸಹ ಅವರ ಪೋಷಕರ ಜೊತೆ ತಿರುಪತಿಗೆ ಬರುತ್ತಾರೆ.. ಅಲ್ಲದೆ, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ..
ಉಚಿತ ದರ್ಶನಕ್ಕೆ ತೆರಳುವ ಭಕ್ತರು ಸರಾಸರಿ 12 ಗಂಟೆಗಳ ಕಾಲ ಕಳೆಯುವ ಸಾಧ್ಯತೆ ಇದೆ. ಆದರೆ ಟಿಟಿಡಿ ಚಿಕ್ಕ ಮಕ್ಕಳ ಪೋಷಕರಿಗೆ ವಿಶೇಷ ದರ್ಶನ ಟಿಕೆಟ್ ಲಭ್ಯಗೊಳಿಸಿದೆ. 12 ವರ್ಷದೊಳಗಿನ ಮಕ್ಕಳಿಗೆ ದರ್ಶನ ಟಿಕೆಟ್‌ ನೀಡಲು ಮುಂದಾಗಿದೆ..
ಭಕ್ತರಿಗಾಗಿ ಟಿಟಿಡಿ ತಿರುಮಲದಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ವೃದ್ಧರು ಮತ್ತು ಅಂಗವಿಕಲರಿಗಾಗಿ ವಿಶೇಷ ಸರತಿ ಸಾಲು ನಿಯೋಜಿಸಿದ್ದು, ಅದಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬಿಡುಗಡೆ ಮಾಡುತ್ತಿದೆ. ತಿರುಮಲದ ಸುಪಥಂ ರಸ್ತೆಯಲ್ಲಿ ಮಕ್ಕಳಿಗಾಗಿ ಟಿಟಿಡಿ ವಿಶೇಷ ಕ್ಯೂ ಲೈನ್ ಅನ್ನು ಸ್ಥಾಪಿಸಿದೆ. ಈ ಕ್ಯುಲೈನ್‌ನಲ್ಲಿ ಮಕ್ಕಳೊಂದಿಗೆ ಪೋಷಕರಿಗೆ ಮಾತ್ರ ಅನುಮತಿಸಲಾಗಿದೆ.
ಈ ದರ್ಶನಕ್ಕೆ ತೆರಳಲು, ಆಧಾರ್ ಕಾರ್ಡ್, ಜನನ ಪ್ರಮಾಣಪತ್ರದಂತಹ ಯಾವುದೇ ಪರಿಶೀಲನೆ ದಾಖಲೆಯನ್ನು ಟಿಟಿಡಿಗೆ ತೋರಿಸಬೇಕು. ಪಾಲಕರು ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ಅಧಿಕಾರಿಗಳಿಗೆ ತೋರಿಸಬೇಕು. ಈ ಸುಪಥಂ ಮಾರ್ಗದ ಮೂಲಕ ಭಕ್ತರಿಗೆ ಕಲ್ಯಾಣೋತ್ಸವ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಸೇರಿದಂತೆ ಇಬ್ಬರು ದಂಪತಿಗಳಿಗೆ ಅವಕಾಶವಿದೆ. 12 ವರ್ಷ ಒಳಗಿನ ಮಕ್ಕಳಿಗೆ ಮಾತ್ರ ಇದು ಅನ್ವಯ.

Leave a Reply

Your email address will not be published. Required fields are marked *

error: Content is protected !!