ಉದಯವಾಹಿನಿ, ಕೊಡಗು: ಮಳೆಗಾಲ ಶುರುವಾಗುತ್ತಲೇ ಜಿಲ್ಲೆಯ ಜನರಲ್ಲಿ ಆತಂಕ ಶುರುವಾಗಿದೆ. ಹೌದು, ಮಡಿಕೇರಿ(Madikeri) ನಗರದ ಹೃದಯ ಭಾಗದಲ್ಲಿಯೇ ಮುಖ್ಯ ರಸ್ತೆಯೊಂದು ಕುಸಿಯುತ್ತಿದೆ.
ಇತ್ತ ಮುಂದುವರೆದ ಮಳೆ ಆರ್ಭಟಕ್ಕೆ ಕಾವೇರಿ ನದಿ ಪ್ರವಾಹ ಹಿನ್ನೆಲೆ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಬಳಿ ಇರುವ ದುಬಾರೆ ಪ್ರವಾಸಿ ತಾಣಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ.
ಕೊಡಗಿನಾದ್ಯಂದ ಭಾರೀ ವರ್ಷ ಧಾರೆ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಮಡಿಕೇರಿ ತಾಲೂಕಿನ ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಪ್ರವಾಹದಲ್ಲಿ ಸ್ನಾನ ಘಟ್ಟ ಮುಳುಗಡೆಯಾಗಿದೆ. ಇದರಿಂದ ಸ್ನಾನಘಟ್ಟದಲ್ಲಿ ಪವಿತ್ರ ಸ್ನಾನ ಮಾಡಲಾಗದೆ ಭಕ್ತರು ಪರದಾಟ ನಡೆಸಿದ್ದಾರೆ. ಜೊತೆಗೆ ಭಾಗಮಂಡಲ – ನಾಪೋಕ್ಲು ರಸ್ತೆ ಜಲಾವೃತವಾದರೂ ಮೇಲ್ಸೇತುವೆ ಇರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಿಲ್ಲ.
