ಉದಯವಾಹಿನಿ, ಬೆಂಗಳೂರು: ಯಾವಾಗಲೂ ನ್ಯಾಯವನ್ನು ಕಾಪಾಡಬೇಕು, ನ್ಯಾಯವನ್ನು ಎತ್ತಿ ಹಿಡಿದರೆ ಆ ನ್ಯಾಯ ನಿಮನ್ನು ಕಾಪಾಡುತ್ತದೆ ಎಂದು ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಡಿಜಿಪಿ ಕಮಲ್‌ಪಂಥ್‌ ಇಂದಿಲ್ಲಿ ತಿಳಿಸಿದರು.ಕೋರಮಂಗಲದ ಕೆಎಸ್‌‍ಆರ್‌ಪಿ ಪರೇಡ್‌ ಮೈದಾನದಲ್ಲಿ ಹಮಿಕೊಂಡಿದ್ದ ಬೀಳ್ಕೊಡುಗೆ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಧರ್ಮೋ ರಕ್ಷತಿ ರಕ್ಷಿತಃ ಅಂದರೆ ನ್ಯಾಯವನ್ನು ಕಾಪಾಡಿದರೆ ಆ ನ್ಯಾಯ ನಿಮನ್ನು ಕಾಪಾಡುತ್ತದೆ. ನ್ಯಾಯ ಕೊಂದರೆ ಅದು ನಿಮನ್ನು ಕೊಲ್ಲುತ್ತದೆ ಎಂದು ವಿವರವಾಗಿ ತಿಳಿಸಿದರು.ಕರ್ನಾಟಕ ರಾಜ್ಯ ಪೊಲೀಸ್‌‍ಗೆ ಇಡೀ ದೇಶದಲ್ಲೇ ಉತ್ತಮವಾದ ಹೆಸರಿದೆ. ಹಾಗಾಗಿ ನೀವೆಲ್ಲರೂ ಅದಕ್ಕೆ ಬದ್ಧರಾಗಿ, ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ ಎಂದರು.
ಪೊಲೀಸ್‌‍ ಇಲಾಖೆಗೆ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲಾಖೆಯನ್ನು ಅವರು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.1990ರಲ್ಲಿ ಕರ್ನಾಟಕ ಪೊಲೀಸ್‌‍ ಕೇಡರ್‌ ಅಧಿಕಾರಿಯಾಗಿ ಆಯ್ಕೆಯಾಗಿ ಕರ್ನಾಟಕ ಪೊಲೀಸ್‌‍ ಸೇವೆಗೆ ಬಂದಾಗ ರಾಜ್ಯದ ಪರಿಸ್ಥಿತಿ ಹಾಗೂ ದೇಶದ ಪರಿಸ್ಥಿತಿ ಹೇಗಿತ್ತು ಎಂಬುವುದನ್ನು ವಿವರಿಸಿದ ಅವರು ನಾನು ಪೊಲೀಸ್‌‍ ಸೇವೆಗೆ ಸೇರುವುದು ನಮ ತಾಯಿಗೆ ಇಷ್ಟವಿರಲಿಲ್ಲ. ನಾನು ಅಖಿಲ ಭಾರತ ಪೊಲೀಸ್‌‍ ಸೇವೆಗೆ ಆಯ್ಕೆಯಾದಾಗ ಬಹಳ ಆತಂಕ ಇತ್ತು. ಏಕೆಂದರೆ ನನಗೆ ಭಾಷೆಯ ಸಮಸ್ಯೆಯಾಗಿತ್ತು.

 

Leave a Reply

Your email address will not be published. Required fields are marked *

error: Content is protected !!