ಉದಯವಾಹಿನಿ, ಮಸ್ಕಿ: 2022-23 ನೇ ಸಾಲಿನಲ್ಲಿ ತಾಲ್ಲೂಕಿನ 190 ‘ಸಿ’ ದರ್ಜೆ ದೇವಸ್ಥಾಗಳ ಪ್ರತಿ ಅರ್ಚಕರಿಗೆ ವಾರ್ಷಿಕ ವೇತನವಾಗಿ ₹60 ಸಾವಿರದಂತೆ ಒಟ್ಟು ₹1.14 ಕೋಟಿ ಬಿಡುಗಡೆಯಾಗಿತ್ತು. ಆದರೆ ₹29.40 ಲಕ್ಷ ಮಾತ್ರ ಪಾವತಿಯಾಗಿದ್ದು ತಹಶೀಲ್ದಾರ್ ಖಾತೆಯಲ್ಲಿ ₹86.40 ಲಕ್ಷ ಉಳಿದುಕೊಂಡಿದೆ.
2023-24 ಸಾಲಿನ ವೇತನಕ್ಕಾಗಿ ಪುನಃ ₹1.14 ಕೋಟಿ ಅನುದಾನವನ್ನು ಮುಜರಾಯಿ ಇಲಾಖೆ ತಹಶೀಲ್ದಾರ್ ಖಾತೆಗೆ ಜಮೆ ಮಾಡಿದೆ. ಆದರೆ ಹಣ ಜಮೆಯಾಗಿ ಮೂರು ನಾಲ್ಕು ತಿಂಗಳು ಸಮೀಸುತ್ತಿದ್ದು ಚುನಾವಣೆ ನೆಪದಲ್ಲಿ ಹಣ ಬಳಕೆಯಾಗದೆ ಉಳಿದುಕೊಂಡಿದೆ ಎನ್ನಲಾಗಿದೆ. ಒಟ್ಟು ಎರಡು ವರ್ಷಗಳಲ್ಲಿ
ಬಿಡುಗಡೆಯಾದ ₹2.28 ಕೋಟಿಯಲ್ಲಿ ಕೇವಲ ₹29.40 ಲಕ್ಷ ಮಾತ್ರ ಅರ್ಚಕರಿಗೆ ಪಾವತಿಸಲಾಗಿದ್ದು ಇನ್ನೂ ₹1.98 ಕೋಟಿ ಬಳಕೆಯಾಗದೆ ಉಳಿದುಕೊಂಡಿದೆ.ದಾಖಲೆಗಳ ಕೊರತೆ : ‘ಸಿ’ ದರ್ಜೆ ದೇವಸ್ಥಾನಗಳಲ್ಲಿನ ಅರ್ಚಕರು ವಂಶಾವಳಿ, ಪಾಸ್ ಬುಕ್, ಇನಾಂ ಪ್ರತಿ, ಒಪ್ಪಿಗೆ ಪತ್ರ, ಆಧಾರ ಕಾರ್ಡ್‍, ಹಾಗೂ ಕಂದಾಯ ನಿರೀಕ್ಷಕರ ದೃಢಿಕರಣ ಸಲ್ಲಿಸಬೇಕು, ಆದರೆ, ಬಹುತೇಕ ದೇವಸ್ಥಾನಗಳು ಅರ್ಚಕರು ದಾಖಲೆಗಳನ್ನು ಸಲ್ಲಿಸದ ಕಾರಣ ಹಣ ಪಾವತಿ ಮಾಡಲು ವಿಳಂಭವಾಗುತ್ತಿದೆ ಎಂದು ತಹಶೀಲ್ದಾರ್ ಕಚೇರಿ ಅಧಿಕಾರಿಯೊಬ್ಬರು ಗೆ ತಿಳಿಸಿದ್ದಾರೆ.

ಮುಜರಾಯಿ ಇಲಾಖೆಯ ‘ಸಿ’ ದರ್ಜೆ ದೇವಸ್ಥಾನಗಳಲ್ಲಿನ ಅರ್ಚಕರಿಗೆ ವೇತನಕ್ಕಾಗಿ ಬಿಡುಗಡೆಯಾದ ಹಣ ಸರಿಯಾದ ಮಾಹಿತಿ ಕೊರತೆ ಹಾಗೂ ದಾಖಲೆಗಳ ಸಲ್ಲಿಕೆಯ ವಿಳಂಭದಿಂದ ಖರ್ಚಾಗದೆ ಇರುವುದು ತಾಲ್ಲೂಕು ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

error: Content is protected !!