ಉದಯವಾಹಿನಿ, ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕೇವಲ ಜನರಿಂದ ಮತ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಭಾರತ್ ಅಕ್ಕಿ ಯೋಜನೆಯನ್ನು ಜಾರಿಗೆ ತಂದು ಇಂದು ಈ ಯೋಜನೆಯನ್ನು ಸ್ಥಗಿತಗೊಳಿಸಿರುವುದು ಜನತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗೆದ ದ್ರೋಹವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದ್ದಾರೆ.
ನಗರದ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಐದು ಯೋಜನೆಗಳನ್ನು ಕಾಂಗ್ರೇಸ್ ಪಕ್ಷ ಜಾರಿಗೆ ತಂದು ಕೋಟ್ಯಾಂತರ ಫಲಾನುಭವಿಗಳಿಗೆ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದು ಎಲ್ಲ ಯೋಜನೆಗಳನ್ನು ಜಾರಿಗೊಳಿಸಿದೆ ಆದರೆ ಕೇವಲ ಒಂದು ಯೋಜನೆಯನ್ನು ಜಾರಿಗೆ ತಂದ ಬಿಜೆಪಿ ಸರ್ಕಾರ ಅಕ್ಕಿ ಯೋಜನೆಯನ್ನು ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ರದ್ದುಗೊಳಿಸಿರುವುದು ನರೇಂದ್ರ ಮೋದಿಯ ದುರಾಡಳಿತ ಹಾಗೂ ನರೇಂದ್ರ ಮೋದಿಯ ಸುಳ್ಳಿನ ಆಶ್ವಾಸನೆಗೆ ಮತ್ತೊಂದು ಸುಳ್ಳು ಸಾಕ್ಷಿಯಾಗಿದೆ,
ಕರ್ನಾಟಕ ರಾಜ್ಯದ ಬಿಜೆಪಿ ನಾಯಕರು ಕಾಂಗ್ರೇಸ್  ಸರ್ಕಾರದ ಜನಪ್ರಿಯತೆಯನ್ನು ಸಹಿಸದೆ ಸುಳ್ಳು ಆರೋಪಗಳನ್ನು ಮಾಡಿ ಪ್ರತಿಭಟನೆ ಮಾಡುತ್ತಿದೆ
ಆದರೆ ಬಿಜೆಪಿಯ ಭೂಗಳ್ಳರು ಸರ್ಕಾರಿ ಜಮೀನನ್ನು ನುಂಗಿ ಇಂದು ಆಧಾರ ರಹಿತ ಆರೋಪ ಮಾಡುತ್ತಿರುವುದು ಅತ್ಯಂತ ಅಪಹಾಸ್ಯವಾಗಿದೆ,
ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ಯಾವ ವಿಷಯದ ಬಗ್ಗೆ ಹೋರಾಟ ನಡೆಸುತ್ತಿದ್ದೇವೆ ಎಂಬ ಪರಿಜ್ಞಾನವೂ ಇಲ್ಲ ಬಿಜೆಪಿ ಆಡಳಿತದಲ್ಲಿ ನಡೆದ ಅಕ್ರಮವನ್ನು ಬಿಜೆಪಿ ಪಕ್ಷದವರೇ ಇಂದು ಹೊರತರುತ್ತಿರುವುದು ಬಿಜೆಪಿಯ ಭ್ರಷ್ಟಾಚಾರಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ರವರು ಸತ್ಯ ಹರಿಶ್ಚಂದ್ರನ ರೀತಿ ಹೇಳಿಕೆ ನೀಡುತ್ತಿದ್ದಾರೆ. ಬಳ್ಳಾರಿಯ ದೇವದಾರಿ ಗಣಿಗಾರಿಕೆಗೆ ಅವಕಾಶ ನೀಡಿ ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡಲು ಮುಂದಾಗಿರುವ ಕುಮಾರಸ್ವಾಮಿ ರವರು ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ಮೂಡ ವಿಷಯದ ಬಗ್ಗೆ ಮಾಡಿರುವ ಟೀಕೆ ಬಿಜೆಪಿಯವರ ಭ್ರಷ್ಟಾಚಾರವನ್ನು ಬೆಂಬಲಿಸಿರುವುದು ಸಾಬೀತಾಗಿದೆ. ಪ್ರಸ್ತುತ ಹೋರಾಟ ನಡೆಸುತ್ತಿರುವ ಬಿಜೆಪಿ ನಾಯಕರು ಅಕ್ರಮ ಭೂಕಬಳಿಕೆ ಆರೋಪವನ್ನು ಹೊತ್ತಿ ಈಗಾಗಲೇ ಆರೋಪ ಸ್ಥಾನದಲ್ಲಿ ನಿಂತಿರುವವರು ಈಗ ಪ್ರಾಮಾಣಿಕರಂತೆ ಹೋರಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!