ಉದಯವಾಹಿನಿ,  ಬೆಂಗಳೂರು:  ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಇಂದು ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೀನ್ ಆಫ್ ಕ್ರೈಂ ಕೈಪಿಡಿ ಸೇರಿ ಮೂರು ಕೈಪಿಡಿಗಳನ್ನು ಬಿಡುಗಡೆ ಮಾಡಿದರು.ಸೀನ್ ಆಫ್ ಕ್ರೈಂ ಕೈಪಿಡಿಯಲ್ಲಿ ಹೊಸ ಕ್ರಿಮಿನಲ್ ಕಾನೂನುಗಳ ಡಿಜಿಟಲ್ ತಂತ್ರಾಂಶ,ರಿಯಲ್ ಟೈಂ ಟ್ರಾಕಿಂಗ್ ಆಫ್ ಹೊಯ್ಸಳ ತಂತ್ರಾಂಶಗಳು ಒಳಗೊಂಡಿವೆ.
ಕಮಾಂಡ್ ಸೆಂಡರ್ ಜೊತೆಗೆ ನೊಂದವರು ಆಡಿಯೊ, ವಿಡಿಯೊ ಕಾಲ್ ಮೂಲಕ ಸಂಪರ್ಕ ಸಾಧಿಸುವ ಸಾಧನ ಬೆಂಗಳೂರು ಸಿಟಿ ಪೊಲೀಸ್- ಸೇಫ್ ಕನೆಕ್ಟ್ ಬಿಡುಗಡೆ ಮಾಡಲಾಯಿತು. ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಸೈಬರ್ ಕ್ರೈಂ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದ್ದು, ಸಮಾವೇಶದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!