ಉದಯವಾಹಿನಿ, ಚಿಕ್ಕಮಗಳೂರು: ಆಟ ಆಡೋ ಮಕ್ಕಳೆಲ್ಲ ಬಾರ್‌ಗೆ ಹೋಗ್ತಿದ್ದಾರೆ ಸರ್. ಬದುಕಿ-ಬಾಳಬೇಕಾದ ಮಕ್ಕಳೆಲ್ಲಾ ಕುಡಿದು ಸಾಯ್ತಿದ್ದಾರೆ. ದಯವಿಟ್ಟು ನಮ್ಮೂರಲ್ಲಿರೋ ಬಾರ್ ಬಂದ್ ಮಾಡ್ಸಿ ಅಂಥ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮನವಿ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮೆಡಿಕಲ್ ಕಾಲೇಜಿಗೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಮಹಿಳೆಯೊಬ್ಬರು ಅವರ ಬಳಿ ಈ ಮನವಿ ಮಾಡಿದ್ದಾರೆ. ನಮ್ಮೂರಲ್ಲಿ ಕದ್ದು- ಮುಚ್ಚಿ ಎಣ್ಣೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ತುಂಬಾ ಕಷ್ಟವಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಕುಡಿದು ಸತ್ತು ಹೋಗ್ತಿದ್ದಾರೆ ಎಂದು ಮಹಿಳೆ ಕೈ ಮುಗಿದು ಸಚಿವರ ಬಳಿ ಹೇಳಿಕೊಂಡ ಘಟನೆ ನಡೆದಿದೆ. ನಮ್ಮ ಊರಿಗೆ ಬಾರ್ & ರೆಸ್ಟೋರೆಂಟ್ ಬೇಡ ಎಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಮಾಡಲಾಗಿದೆ. ಇಷ್ಟಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಚಿವರ ಮುಂದೆ ಗ್ರಾಮಸ್ಥರು ಹೇಳಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!