ಉದಯವಾಹಿನಿ,ಪಡುಬಿದ್ರಿ: ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೊ ಡೀಸೆಲ್ ತಾಳೆ ಎಣ್ಣೆ ತಯಾರಿಕಾ ಘಟಕದಿಂದ ಪಾದೆಬೆಟ್ಟು ಗ್ರಾಮದಲ್ಲಿ ಹರಿಯುವ ತೋಡಿನಲ್ಲಿ ನೀರಿನೊಂದಿಗೆ ಎಣ್ಣೆ ಮಿಶ್ರಿತ ನೀರು ಹರಿದು ತೊಂದರೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎಣ್ಣೆ ಮಿಶ್ರಿತ ನೀರು ಹರಿಯುತ್ತಿರುವುದನ್ನು ಚಿತ್ರೀಕರಿಸಿ ಪರಿಸರ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮಕ್ಕಾಗಿ ಒತ್ತಾಯಿಸಿದರು.
ಈಗಾಗಲೇ ಈ ಪ್ರದೇಶದ ಬಾವಿಗಳ ನೀರು ಮಲಿನವಾಗಿರುವ ಬಗ್ಗೆ ಪರೀಕ್ಷಾ ವರದಿಗಳಿಂದ ಸಾಬೀತಾಗಿದ್ದು, ಜಿಲ್ಲಾಡಳಿತ ಈ ಮನೆಗೆಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗೇಶ್ ರಾವ್ ಆಗ್ರಹಿಸಿದ್ದಾರೆ.

ಘಟಕದ ಸುತ್ತಮುತ್ತ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕಂಪನಿ ಕದ್ದು ಮುಚ್ಚಿ ಎಣ್ಣೆ ಮಿಶ್ರಿತ ನೀರು ಮಳೆನೀರಿನೊಂದಿಗೆ ಹರಿಯಲು ಬಿಡುತ್ತಿದ್ದು, ಮುಂದಿನ ದಿನಗಳಲ್ಲಿ ಕೃಷಿ ಭೂಮಿ ಸಹಿತ ಬಾವಿಗಳು ಕಲುಷಿತಗೊಳ್ಳುವ ಭೀತಿಯಿದೆ. ಇದನ್ನು ತಡೆಗಟ್ಟದಿದ್ದಲ್ಲಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!