ಉದಯವಾಹಿನಿ, ಬೆಂಗಳೂರು: ನಿರಂತರ ಬೀಳುತ್ತಿರುವ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ. ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ಶೇ.39ರಷ್ಟು ನೀರು ಸಂಗ್ರಹವಾಗಿದೆ.ಮುಂಗಾರು ಮಳೆ ಕೈಕೊಟ್ಟಿದ್ದ ಪರಿಣಾಮ ಕಳೆದ
ವರ್ಷ ಇದೇ ಅವಧಿಯಲ್ಲಿ ಎಲ್ಲಾ ಜಲಾಶಯಗಳಲ್ಲಿ 196.87ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಆದರೆ, ಈ ವರ್ಷ 349.50 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅಂದರೆ, 153 ಟಿಎಂಸಿ ಅಡಿಯಷ್ಟು ಹೆಚ್ಚು ನೀರಿದೆ.
ಕಾವೇರಿ ಜಲಾನಯನ ಭಾಗದಲ್ಲಿ ಒಳಹರಿವು ಇಳಿಮುಖವಾಗುತ್ತಿದ್ದರೆ, ಕೃಷ್ಣಾ ಕೊಳ್ಳ ಹಾಗೂ ಜಲ ವಿದ್ಯುತ್ ಉತ್ಪಾದಿಸುವ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಕಾವೇರಿ ನದಿಪಾತ್ರದ ಜಲಾಶಯಗಳಿಗೆ ಶೇ.60ರಷ್ಟು ನೀರು ಸಂಗ್ರಹವಾಗಿದೆ.
ಭರ್ತಿಯತ್ತ ಕಬಿನಿ ಜಲಾಶಯ: ಕಬಿನಿ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಅಡಿಯಷ್ಟಿದ್ದು, ಇಂದು 18.52 ಟಿಎಂಸಿ ಅಡಿಯಷ್ಟಿದೆ. ಕಳೆದ ವರ್ಷ ಕೇವಲ 9.99 ಟಿಎಂಸಿ ಅಡಿಯಷ್ಟಿತ್ತು. ಒಳಹರಿವು 6 ಸಾವಿರ ಕ್ಯುಸೆಕ್‌್ಸಗಿಂತ ಹೆಚ್ಚಿದ್ದು, 2000 ಕ್ಯುಸೆಕ್‌್ಸ ಹೊರ ಹರಿವಿದೆ.ಹಾರಂಗಿ ಜಲಾಶಯದಲ್ಲಿ ಶೇ.68ರಷ್ಟು ನೀರಿದೆ.ಒಳಹರಿವು ಕೇವಲ ಎರಡು ಸಾವಿರದಷ್ಟಿದೆ. ಗರಿಷ್ಠ ಮಟ್ಟ ತಲುಪಲು ಇನ್ನೂ 3 ಟಿಎಂಸಿಯಷ್ಟು ನೀರು ಬೇಕಿದೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ 3 ಟಿಎಂಸಿಯಷ್ಟು ಹೆಚ್ಚು ನೀರಿದೆ. ಈಗ ಶೇ.51ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಒಳಹರಿವು 6 ಸಾವಿರ ಕ್ಯುಸೆಕ್‌್ಸಗೂ ಹೆಚ್ಚಿದೆ.
ಜೀವನಾಡಿ ಕೆಆರ್ಎಸ್ ಜಲಾಶಯದಲ್ಲಿ ಶೇ.52ರಷ್ಟು ನೀರು ಸಂಗ್ರಹವಾಗಿದೆ. ಒಳಹರಿವು 6 ಸಾವಿರ ಕ್ಯುಸೆಕ್‌್ಸಗೂ ಹೆಚ್ಚಿದೆ. 49.45 ಟಿಎಂಸಿ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ದುಪ್ಪಟ್ಟು ನೀರು ಸಂಗ್ರಹವಾಗಿದೆ.

 

Leave a Reply

Your email address will not be published. Required fields are marked *

error: Content is protected !!