ಉದಯವಾಹಿನಿ, ಲಕ್ಷ್ಮೇಶ್ವರ : ತಾಲೂಕಿನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ರಾಜ್ಯದಲ್ಲಿನ ಸರ್ಕಾರಿ ನೌಕರರು ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದು ರಾಜ್ಯ ಮತ್ತು ದೇಶದ ಕೋವಿಡ್, ಮತ್ತಿತರ ಸಂಕಷ್ಟ ಸಮಯದಲ್ಲಿ ಸರ್ಕಾರದೊಂದಿಗೆ ನೌಕರರು ಕೈಜೋಡಿಸಿದ್ದಾರೆ.
ನೌಕರರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದು ಎನ್‍ಪಿಎಸ್ ಪದ್ಧತಿ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮನವಿ ಪತ್ರ ಸ್ವೀಕರಿಸಿದ ತಹಸಿಲ್ದಾರ್ ವಾಸುದೇವ್ ವಿ ಸ್ವಾಮಿಯವರು ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವುದಾಗಿ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಡಿ ಎಚ್ ಪಾಟೀಲ್ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷರಾದ ಬಿ ಎಸ್ ಹರ್ಲಾಪುರ, ಶಿಕ್ಷಣಾಧಿಕಾರಿ ಸಂಘದ ಅಧ್ಯಕ್ಷರಾದ ಎಂಬಿ ಹೊಸಮನಿ, ಎಂಎ ನದಾಫ್, ಚಂದ್ರಕಾಂತ ನೇಕಾರ, ಬಿ ಎಂ ಕುಂಬಾರ್, ಎಫ್ ಎಸ್ ತಳವಾರ್, ಎಂ ಎಸ್ ಕೊಕ್ಕರಗುಂದಿ, ಎಂಡಿ ವಾರದ, ಬಸವರಾಜ ಯತ್ನಳ್ಳಿ, ಬಿಎಂ ಯಾರ್ಗುಪ್ಪಿ, ಎಂ ಎಸ್ ಹಿರೇಮಠ, ಎಂ ಎನ್ ಭರಮಗೌಡ್ರ. ಸತೀಶ ಬೋಮಲೆ, ಗುರು ಹವಳದ, ಗೀತಾ ಹಳ್ಯಾಳ, ಎಲ್ ನಂದಣ್ಣನವರ, ರವಿ ಉಮಚಗಿ, ಫಕೀರೇಶ ಡಂಬಳ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!