ಉದಯವಾಹಿನಿ, ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮದ ರೂವಾರಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಎಂದು ಜಾರಿನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ರಿಮ್ಯಾಂಡ್ ಅರ್ಜಿ ಸಲ್ಲಿಸಿದೆ. ಬೆಂಗಳೂರಿನ ವಿಶೇಷ ಜನಪ್ರತಿನಿ„ಗಳ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು, 100 ಪುಟಗಳ ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದು, ತಾವು ಬಿ.ನಾಗೇಂದ್ರ ಅವರನ್ನು ಏಕೆ ಬಂಧಿಸುತ್ತಿದ್ದೇವೆ ಎಂದು ಅರ್ಜಿಯಲ್ಲಿ ಮನವರಿಕೆ ಮಾಡಿದ್ದಾರೆ.
ಈ ಅಕ್ರಮದ ಮಾಸ್ಟರ್ ಮೈಂಡ್ ಬಿ.ನಾಗೇಂದ್ರ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ. ಅಕ್ರಮಕ್ಕೆ ಇವರೇ ಸೂತ್ರಧಾರರು. ಇವರ ನಿರ್ದೇಶನದಂತೆಯೇ ಇದು ನಡೆದಿದೆ ಎಂದು ಹೇಳಿದೆ.ನನಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಹೇಳುತ್ತಿರುವ ಬಿ.ನಾಗೇಂದ್ರ ನಿಗಮದಲ್ಲಿದ್ದ 187 ಕೋಟಿ ಹಣದಲ್ಲಿ ಮೊದಲು 97 ಕೋಟಿಯನ್ನು ವರ್ಗಾವಣೆ ಮಾಡಲು ಅಧಿಕಾರಿಗಳ ಮೇಲೆ ನಿರಂತರವಾಗಿ ಒತ್ತಡ ಹಾಕಿದ್ದರು.
ಒಂದು ಹಂತದಲ್ಲಿ ಹಣ ವರ್ಗಾವಣೆ ಮಾಡದಿದ್ದರೆ ಹಿಂದಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸೇವೆಯಿಂದ ಅಮಾನತುಪಡಿಸುವ ಬೆದರಿಕೆ ಹಾಕಿದ್ದರು ಎಂಬುದನ್ನು ಪತ್ತೆಹಚ್ಚಿದೆ.ಹೈದರಾಬಾದ್‍ನ ಬಂಜಾರಾ ಹಿಲ್ಸ್‍ನಲ್ಲಿರುವ ರತ್ನಾಕರ ಬ್ಯಾಂಕ್‍ನಲ್ಲಿ 18 ನಕಲಿ ಖಾತೆಗಳನ್ನು ತೆರೆದು ಮೇ 29ರಂದು ನಿಗಮದಿಂದ ರಾತ್ರೋರಾತ್ರಿ 40 ಕೋಟಿ ರೂ.ಗೂ ಅ„ಕ ಹಣ ವರ್ಗಾವಣೆ ಮಾಡಲಾಗಿದೆ.
ಮಹರ್ಷಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಮುಖ್ಯ ಹಣಕಾಸು ಅಧೀಕ್ಷಕರು ಸೇರಿದಂತೆ ನಿಗಮ ಹಲವು ಅಧಿಕಾರಿಗಳು ಬೆಂಗಳೂರಿನ ಶಾಂಗ್ರೀಲ ಹೋಟೆಲ್‍ನಲ್ಲಿ ಸಭೆ ನಡೆಸಿದ್ದರು ಎಂದು ರಿಮ್ಯಾಂಡ್ ಅರ್ಜಿಯಲ್ಲಿ ಇಡಿ ಉಲ್ಲೇಖ ಮಾಡಿದೆ.
