ಉದಯವಾಹಿನಿ, ಕೋಲಾರ: ದೇಶದ ಯಾವುದೇ ಬ್ಯಾಂಕ್‌ಗಳು, ಸಹಕಾರ ಸಂಘಗಳು ನೀಡದ ಸೇವೆಗಳನ್ನು ಗ್ರಾಹಕರ ಮನೆಬಾಗಿಲಿನಲ್ಲಿ ಸಿಗುವಂತೆ ಸಂಗಮಮ್ ಸಹಕಾರ ಸಂಘ ನೀಡುವುದಲ್ಲದೆ ಸಣ್ಣ ವ್ಯಾಪಾರಸ್ಥರಿಗೆ ಮತ್ತು ರೈತರಿಗೆ ಹಾಗೂ ಪ್ರಮುಖವಾಗಿ ಮಹಿಳೆಯರಿಗೆ ಸಣ್ಣ ಉಳಿತಾಯ ಮಾಡಲು ಮತ್ತು ಠೇವಣಿಗಳನ್ನು ಇಡಲು ಹಾಗೂ ಸಾಲ ಪಡೆಯಲು ಸಹಕಾರ ನೀಡುತ್ತದೆ ಎಂದು ಕರ್ನಾಟಕ ರಾಜ್ಯ ವಲಯದ ಸಂಗಮಮ್ ಕೋ ಆಪರೇಟೀವ್ ಸೊಸೈಟಿಯ ಸಿ.ಇ.ಓ ಸಿಂಗದೇವನ್ ತಿಳಿಸಿದರು.
ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಎಸ್.ವಿ.ಎಂ.ಕಾಂಪ್ಲೆಕ್ಸ್‌ನಲ್ಲಿ ಭಾರತ ಸರ್ಕಾರದ ಸಹಕಾರಿ ಇಲಾಖೆಯಿಂದ ಅನುಮೋದಿಸಲಾದ ಸಂಗಮಮ್ ಮಹಿಳಾ ವಿವಿಧೋದ್ದೇಶ ಮಿತವ್ಯಯ ಮತ್ತು ಸಾಲ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸೊಸೈಟಿಯು ಕಳೆದ ೨೦ ವರ್ಷಗಳಿಂದ ತಮಿಳುನಾಡು, ಪಾಂಡಿಚೇರಿ ಹಾಗೂ ಕರ್ನಾಟಕದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಕೋಲಾರ ನಗರದಲ್ಲಿ ನೂತನ ಶಾಖೆಯನ್ನು ಪ್ರಾರಂಭ ಮಾಡುತ್ತಿರುವುದು ಸಂತೋಷ ತಂದಿದೆಯೆಂದರು.

Leave a Reply

Your email address will not be published. Required fields are marked *

error: Content is protected !!