ಉದಯವಾಹಿನಿ, ಮುಳಬಾಗಿಲು: ಕೋಚಿಮುಲ್‌ಗೆ ಕೂಡಲೇ ಆಡಳಿತ ಅಧಿಕಾರಿಯನ್ನು ನೇಮಕ ಮಾಡಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಆಡಳಿತ ಮಂಡಳಿಯನ್ನು ರದ್ದು ಮಾಡಿ ಚುನಾವಣೆ ನಡೆಸುವ ಮುಖಾಂತರ ಒಕ್ಕೂಟದ ಭ್ರಷ್ಠಾಚಾರತೆಗೆ ಕಡಿವಾಣ ಹಾಕಬೇಕೆಂದು ಇದೇ ೧೯ರ ಶುಕ್ರವಾರ ಹಾಲು ಒಕ್ಕೂಟದ ಮುಂದೆ ಬಾರ್ ಕೋಲ್ ಚಳುವಳಿ ಮಾಡಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ, ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬರ ಹಾಗೂ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ರೈತರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿರುವ ಹೈನೋದ್ಯಮದ ಮರಣ ಶಾಸನವನ್ನು ಒಕ್ಕೂಟದ ಚುನಾಯಿತ ಜನ ಪ್ರತಿನಿಧಿಗಳು ಬರೆಯುತ್ತಿದ್ದಾರೆ. ಪ್ರತಿವರ್ಷ ಒಕ್ಕೂಟ ಅಭಿವೃದ್ದಿ ಹೆಸರಿನಲ್ಲಿ ರೈತರಿಗೆ ನೀಡುವ ಹಾಲಿನ ದರವನ್ನು ೧ ಅಥವಾ ೨ ರೂಪಾಯಿ ಇಳಿಕೆ ಮಾಡುವ ಮುಖಾಂತರ ರೈತರ ಬೆವರ ಸಗಣಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ಶ್ರೀಮಂತ ಜೀವನ ನಡೆಸುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒಕ್ಕೂಟದ ಅವ್ಯವಸ್ಥೆ ವಿರುದ್ದ ಅಕ್ರೋಷ ವ್ಯಕ್ತಪಡಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಅವಧಿ ಮುಗದಿದ್ದರೂ ಚುನಾವಣೆ ನಡೆಸದೆ ಸರ್ಕಾರ ಮೌನವಹಿಸದೆ ಹಾಲು ಒಕ್ಕೂಟದ ನೇಮಕಾತಿಯಲ್ಲಿ ಭ್ರಷ್ಠಾಚಾರ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಈಗಾಗಲೇ ಸ್ಪಷ್ಟ ಪಡಿಸಿದ್ದು, ಇಂತಹ ಭ್ರಷ್ಟಾಚಾರ ಆರೋಪ ಗೊತ್ತಿರುವ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ಮುಂದು ವರೆಯಬಾರದೆಂದು ಆಗ್ರಹಿಸಿದರು.
ಒಕ್ಕೂಟದಲ್ಲಿ ಎಂದೆAದು ನೋಡದಷ್ಟು ಭ್ರಷ್ಟಾಚಾರ ತಾಂಡವಾಡುತ್ತಿದೆ. ನೇಮಕಾತಿಯಿಂದ ಹಿಡಿದು ಹಾಲಿನ ಪ್ರೋತ್ಸಾಹ ಧನ ಬಿ.ಎಂ.ಸಿ.ಗಳಲ್ಲಿ ಕಲಬೆರಿಕೆ ಮತ್ತು ಹಾಲು ಉತ್ಪನ್ನಗಳ ಮಾರುಕಟ್ಟೆಯ ವ್ಯವಹಾರ ವಹಿವಾಟಿನಲ್ಲೂ ಭ್ರಷ್ಟಾಚಾರ ಒಟ್ಟಾರೆಯಾಗಿ ಒಕ್ಕೂಟದ ಯಾವುದೇ ಒಬ್ಬ ಚುನಾಯಿತ ಪ್ರತಿನಿಧಿ ಹಾಗೂ ಆಡಳಿತ ಮಂಡಳಿಯ ಕಾರ್ಮಿಕರು ಹಸುವನ್ನು ಕಟ್ಟಿಲ್ಲ ಮೇವನ್ನು ಖರಿದಿ ಮಾಡಿಲ್ಲ. ಬಿಸಲು ಗಾಳಿಯಲ್ಲಿ ಹಸುಗಳನ್ನು ಹಾರೈಕೆ ಮಾಡಿಲ್ಲ. ಸಗಣಿ, ಗಂಜಲ, ವಾಸನೆ ಇಲ್ಲದೆ, ಬಿಳಿ ಬಟ್ಟೆ ಹಾಕಿಕೊಂಡು ಏಸಿಕಾರಿನಲ್ಲಿ ಓಡಾಡಿಕೊಂಡು ಕೋಟಿ ಕೋಟಿ ರೈತರ ಹೆಸರಿನಲ್ಲಿ ಒಕ್ಕೂಟವನ್ನು ಬೀದಿ ಪಾಲು ಮಾಡುತ್ತಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಒಕ್ಕೂಟ ರೈತರ ಕಷ್ಟದ ಬಗ್ಗೆ ಚರ್ಚೆಮಾಡುತ್ತಿಲ್ಲ. ತಮಗೆ ಇಷ್ಟ ಬಂದ ರೀತಿ ಹಿಟ್ಲರ್ ಆಡಳಿತದಂತೆ ಒಕ್ಕೂಟದಲ್ಲಿ ಸಭೆ ಸೇರಿ ಅವರೆ ನಿರ್ಧಾರ ಕೈಗೊಂಡು ಬೆಲೆ ಏರಿಕೆಯನ್ನು ಮಾಡುತ್ತಾರೆ. ಇಳಿಕ್ಕೆಯನ್ನು ಮಾಡಿ ನಂತರ ಒಕ್ಕೂಟದ ಅಭಿವೃದ್ದಿ ಎಂದು ತಮ್ಮ ಕುಟುಂಬ ಸಮೇತ ವಿದೇಶಿ, ಪ್ರವಾಸ ಮಾಡಿ ಮೋಜಿ ಮಸ್ತಿಯಲ್ಲಿ ತೊಡಗಿದ್ದಾರೆಂದು ಗಂಭೀರ ಆರೋಪ ಮಾಡಿದರು.

Leave a Reply

Your email address will not be published. Required fields are marked *

error: Content is protected !!