ಉದಯವಾಹಿನಿ, ಆಗ್ರ : ಮಗನೊಬ್ಬ ಪೊಲೀಸ್ ಠಾಣೆ ಎದುರು ತಾಯಿಗೆ ಬೆಂಕಿ ಹಚ್ಚಿರುವ ಘಟನೆ ಅಲಿಗಢದಲ್ಲಿ ನಡೆದಿದೆ.ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಇದನ್ನು ಬಗೆಹರಿಸಿಕೊಡಿ ಎಂದು ಕೇಳಲು ಪೊಲೀಸ್ ಠಾಣೆಗೆ ಹೋಗಿದ್ದರು, ತಾವು ಹೋದ ಕೆಲಸ ಆಗದಿದ್ದಾಗ ಮಹಿಳೆ ಪೆಟ್ರೋಲ್ ಸುರಿದುಕೊಂಡು ಹೆದರಿಸಲು ಶುರು ಮಾಡಿದ್ದರು ಇದೇ ಸಮಯದಲ್ಲ ಅವರ ಮಗ ಬೆಂಕಿ ಹಚ್ಚಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ ಮಗನನ್ನು ಬಂಧಿಸಲಾಗಿದೆ.
ಜ್ವಾಲೆ ಹೆಚ್ಚುತ್ತಿದ್ದಂತೆ ತಾಯಿ ಕಿರುಚುತ್ತಲೇ ಇದ್ದಳು. ಆದರೆ ಆ ಕ್ರೂರ ಕಿವಿಗೆ ಅದು ಕೇಳಿಸಲೇ ಇಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿ ಮಹಿಳೆ ತನ್ನ ಮಗನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ್ದು ಪೊಲೀಸರ ಜತೆ ಮಾತುಕತೆ ನಡೆಸಿದ್ದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಯೇ ಮೊದಲು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು, ಪೊಲೀಸರು ಲೈಟರ್ ಕಿತ್ತುಕೊಳ್ಳಲು ಹೋದಾಗ ಅದು ಕೆಳಗೆ ಬಿದ್ದಿತ್ತು, ಆಗ ಅದನ್ನು ತೆಗೆದುಕೊಂಡ ಮಗ ತಾಯಿಗೆ ಬೆಂಕಿ ಹಚ್ಚಿದ್ದಾನೆ.

Leave a Reply

Your email address will not be published. Required fields are marked *

error: Content is protected !!