ಉದಯವಾಹಿನಿ, ಮೈಸೂರು: ಮೈಸೂರಿನ ಪಾರಂಪರಿಕ ಹೆಗ್ಗುರುತುಗಳಲ್ಲಿ ಒಂದಾದ ದೊಡ್ಡ ಗಡಿಯಾರದ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 20 ದಿನಗಳಲ್ಲಿ ತನ್ನ ಕಾರ್ಯ ಮುಂದುವರೆಸಲಿದೆ.94 ವರ್ಷಗಳ ಇತಿಹಾಸವಿರುವ ದೊಡ್ಡ ಗಡಿಯಾರ ಕಟ್ಟಡ ಶಿಥಿಲವಾಗಿದ್ದಲ್ಲದೇ, ಗಡಿಯಾರವೂ ಕೆಟ್ಟಿತ್ತು. ಈ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಸುಮಾರು 42 ಲP್ಷÀ ರೂ. ಅನುದಾನದಲ್ಲಿ 2023ರ ಆಗ¸್ಟï ತಿಂಗಳಿಂದ ನವೀಕರಣ ಕಾರ್ಯ ಆರಂಭಿಸಿತ್ತು. ಪಾರಂಪರಿಕ ದೊಡ್ಡ ಗಡಿಯಾರ ಕಟ್ಟಡ ಸಂರP್ಷÀಣೆ ಮಾಡುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಆರಂಭÀವಾದ ನವೀಕರಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಮಳೆ ಬಿಡುವು ನೀಡಿದರೆ 15-20 ದಿನಗಳಲ್ಲಿ ಕಾಮಗಾರಿ ಸಂಪೂರ್ಣವಾಗಲಿದೆ.
1927ರ ಆಗ¸್ಟï 8ರಂದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ 25ನೇ ವರ್ಷದ ನೆನಪಿಗಾಗಿ ಪುರಭವನದ ಎದುರು 75 ಅಡಿ ಎತ್ತರದ ಈ ಪಾರಂಪರಿಕ ದೊಡ್ಡ ಗಡಿಯಾರ ನಿರ್ಮಾಣ ಕಾರ್ಯಾರಂಭÀವಾಯಿತು. ಕ್ಲಾಕ್ ಟವರ್‍ನ ನಾಲ್ಕು ಕಡೆಯಲ್ಲೂ ವೃತ್ತಾಕಾರದ ಗಡಿಯಾರವಿದ್ದು, ಕನ್ನಡ ಅಂಕಿಗಳ ಬಳಕೆಯೊಂದಿಗೆ ಭಾಷಾಭಿಮಾನ ಬಿಂಬಿಸುವಂತೆ ನಿರ್ಮಿಸಲಾಗಿತ್ತು.
ಪ್ರತಿ ಗಂಟೆಗೊಮ್ಮೆ ಗಡಿಯಾರದ ಗಂಟೆ ಶಬ್ಧ 5 ಕಿ.ಮೀ. ವರೆಗೆ ಕೇಳಿಸುತ್ತಿತ್ತು. ಕಾಲ ಕ್ರಮೇಣ ಈ ಗಡಿಯಾರ ದುರಸ್ತಿಗೊಳಗಾಗಿದ್ದು, 1990ರ ನಂತರ ಗಡಿಯಾರ ತನ್ನ ಶಬ್ಧವನ್ನು ನಿಲ್ಲಿಸಿತಾದರೂ, ಸಮಯವನ್ನು ಮಾತ್ರ ಸರಿಯಾಗಿ ತೋರಿಸುತ್ತಿತ್ತು. ಕ್ರಮೇಣ ಗಡಿಯಾರವೂ ಕೆಟ್ಟಿತ್ತು.
ಸುಣ್ಣದ ಗಾರೆ, ನದಿ ತಟದ ಮರಳು ಬಳಕೆ: ಪಾರಂಪರಿಕ ದೊಡ್ಡ ಗಡಿಯಾರ ನವೀಕರಣಕ್ಕೆ ಸುಣ್ಣದ ಗಾರೆ ಹಾಗೂ ನದಿ ತಟದ ಮರಳು ಬಳಕೆ ಮಾಡಲಾಗಿದೆ. ನೆಲದಲ್ಲಿ ಹೆಗ್ಗಣಗಳು ಕೊರೆದಿದ್ದ ಜಾಗವನ್ನು ಮುಚ್ಚಲು ಎಂ-ಸ್ಯಾಂಡ್ ಬಳಕೆ ಮಾಡಲಾಗಿದೆ. ಮೈಸೂರು ಪೆÇೀಸ್ಟಲ್ ಟ್ರೈನಿಂಗ್(ಅಂಚೆ ಪ್ರಶಿP್ಷÀಣ) ಕಾಲೇಜಿನಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಯಲ್ಲಿಯೂ ಸುಣ್ಣದ ಗಾರೆ ಬಳಸುತ್ತಿದ್ದು, ಅಲ್ಲಿಂದಲೇ ಸುಣ್ಣದ ಗಾರೆ ತಂದು ದೊಡ್ಡ ಗಡಿಯಾರಕ್ಕೆ ಬಳಸಲಾಗುತ್ತಿದೆ.
