ಉದಯವಾಹಿನಿ, ಬೆಂಗಳೂರು: ಮೈಸೂರು ಎಕ್ಸ್ ಪ್ರೆಸ್‌‍ವೇಯಲ್ಲಿ ಓವರ್‌ಸ್ಪೀಡ್‌ನಲ್ಲಿ ಚಲಾಯಿಸುವವರು ಹುಷಾರಾಗಿರಬೇಕು. ರ್ಯಾಶ್‌ ಡ್ರೈವಿಂಗ್‌ಮಾಡುವವರು ಕಂಬಿ ಎಣಿಸಬೇಕಾಗುತ್ತದೆ. ಹೈವೇಯಲ್ಲಿ ಹಿಡಿಯೋರಿಲ್ಲ ಎಂದು ಓವರ್‌ಸ್ಪೀಡ್‌‍ ಹೋದರೆ ನಿಮ ಮೇಲೆ ಎಫ್‌ಐಆರ್‌ ದಾಖಲಾಗಲಿದೆ.ಬೆಂಗಳೂರು-ಮೈಸೂರು ಹೈವೇಯಲ್ಲಿ ಟ್ರಾಫಿಕ್‌ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ರ್ಯಾಶ್‌ ಡ್ರೈವಿಂಗ್‌ ನಿಲ್ಲುತ್ತಿಲ್ಲ. ಹೀಗಾಗಿ ಅತಿ ವೇಗದಲ್ಲಿ ಚಾಹನ ಚಲಾಯಿಸುವವರ ವಿರುದ್ಧ ಕೇಸ್‌‍ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ.
130 ಕಿಮೀಗೂ ಅಧಿಕ ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಇಂಟರ್‌ಸೆಪ್ಟರ್‌ಗಳು ಇದ್ದರೂ ಹಲವರು ಕ್ಯಾರೇ ಮಾಡುತ್ತಿಲ್ಲ. ಹೀಗಾಗಿ ಅಪಘಾತಗಳಾಗುತ್ತಿವೆ. ಅತಿ ವೇಗದ ಚಾಲನೆಯಿಂದಲೇ 90%ರಷ್ಟು ಅಪಘಾತಗಳು ಸಂಭವಿಸುತ್ತಿವೆ.
ನಿನ್ನೆ ಮೈಸೂರು ಬೆಂಗಳೂರು ಹೈವೇ ಸಿಸಿಟಿವಿಗಳನ್ನು ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್‌ ಕುಮಾರ್‌ ಪರಿಶೀಲನೆ ಮಾಡಿದ್ದರು. ಪರಿಶೀಲನೆ ವೇಳೆ ಒಂದೇ ದಿನ 150ಕ್ಕೂ ಹೆಚ್ಚು ಅತಿ ವೇಗದ ಚಾಲನೆ ಕೇಸ್‌‍ಗಳು ಪತ್ತೆಯಾಗಿವೆ.
ಇದರಿಂದ ಓವರ್‌ಸ್ಪೀಡ್‌ಗೆ ಬ್ರೇಕ್‌ ಹಾಕಲು ಎಡಿಜಿಪಿ ಅಲೋಕ್‌ಕುಮಾರ್‌ ಹೊಸ ಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ. ಆಗಸ್ಟ್‌ 1ರಿಂದಲೇ ಇದನ್ನು ಜಾರಿಗೊಳಿಸಲಾಗುತ್ತಿದೆ.ಸಾಮಾಜಿಕ ಜಾಲತಾಣ ಎಕ್‌್ಸ ಖಾತೆಯಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು ಮಿತಿ ಮೀರಿದ ವೇಗದಿಂದ ಚಾಲನೆ ಮಾಡುವವರ ವಿರುದ್ಧ ಎಫ್‌‍ಐಆರ್‌ ದಾಖಲಿಸಲಾಗುತ್ತದೆ. ಸ್ಪೀಡ್‌ನಲ್ಲಿ 130 ಕಿಮೀ ದಾಟಿದರೆ ಎಫ್‌‍ಐಆರ್‌ ದಾಖಲಾಗಲಿದೆ. ನಂತರ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ಚಾಲನೆ ಪರವಾನಗಿಯೂ ರದ್ದಾಗಬಹುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!