ಉದಯವಾಹಿನಿ, ಧಾರವಾಡ :  ಅಮ್ಮಿನಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅನಿರೀಕ್ಷಿತ ಭೇಟಿ ನೀಡಿ, ಮೆಲ್ದರ್ಜೆಗೊಂಡಿರುವ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿ ಪರಿಶೀಲಿಸಿದರು.
ಕಟ್ಟಡ ಕಾಮಗಾರಿ ಮಾಡುತ್ತಿರುವ ಹೆಲ್ತ್ ಇಂಜಿನಿಯರಿAಗ್ ಇಲಾಖೆ ಅಧಿಕಾರಿಗಳಿಂದ ಕಟ್ಟಡದ ಕಾಮಗಾರಿ, ಮುಕ್ತಾಯಗೊಳ್ಳುವ ಅವಧಿ ಬಗ್ಗೆ ಮಾಹಿತಿ ಪಡೆದರು.
ಕಳೆದ (೨೦೨೩) ವರ್ಷ ರಾಜ್ಯ ಸರಕಾರವು ಅಮ್ಮಿನಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೆಲ್ದರ್ಜೆಗೆರಿಸಿ, ಸಮುದಾಯ ಆರೋಗ್ಯ ಕೇಂದ್ರವಾಗಿ ಮಾಡಿದೆ ಇದಕ್ಕೆ ಅಗತ್ಯವಿರುವ ನೂತನ ಕಟ್ಟಡ ನಿರ್ಮಿಸಲು ರೂ ೯.೩ ಕೋಟಿ ಅನುದಾನವನ್ನು ಹೆಲ್ತ್ ಇಂಜಿನಿಯರಿAಗ್ ಇಲಾಖೆಗೆ ಬಿಡುಗಡೆ ಮಾಡಿದೆ. ೩೦ ಹಾಸಿಗೆ ಸೌಲಭ್ಯದ ಈ ನೂತನ ಆಸ್ಪತ್ರೆಯ ನಿರ್ಮಾಣ ಕಾರ್ಯ ಕಾಲಮಿತಿಯಲ್ಲಿ ಮುಕ್ತಾಯವಾಗಬೇಕು ಮತ್ತು ಗುಣಮಟ್ಟದ ಕಟ್ಟಡವಾಗಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ನೂತನ ಕಟ್ಟಡದ ವಾರ್ಡಗಳು, ಶಸ್ತçಚಿಕಿತ್ಸೆ ವಿಭಾಗ, ಬಾಣಂತಿಯರ ವಿಭಾಗ, ಶವಾಗಾರ, ವೈದ್ಯರ ಕೊಠಡಿ, ಚಿಕಿತ್ಸಾ ಕೋಣೆ ಸೇರಿದಂತೆ ಪ್ರತಿ ವಿಭಾಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದು, ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಸ್ಥಾನಿಕ ವೈದ್ಯಾಧಿಕಾರಿ ಡಾ.ಬೀನಾ ಶೂರ್ಪಾಲಿ ಹಾಗೂ ಹೆಲ್ತ್ ಇಂಜಿನಿಯರಿAಗ್ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!