ಉದಯವಾಹಿನಿ, ಲಕ್ಷ್ಮೇಶ್ವರ: ಪಟ್ಟಣದ ಜನರ ಬಹುದಿನಗಳ ಕನಸಾಗಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‍ ಕೇಂದ್ರವನ್ನು ಶಾಸಕ ಡಾ.ಚಂದ್ರು ಲಮಾಣಿ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮೂತ್ರಪಿಂಡ ರೋಗದಿಂದ ಬಳಲುತ್ತಿರುವವರಿಗಾಗಿ ಡಯಾಲಸಿಸ್‍ ಕೇಂದ್ರ ತೆರೆಯಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿತ್ತು.
ಸಧ್ಯ ಕೇಂದ್ರ ಆರಂಭಗೊಂಡಿದ್ದು, ರೋಗಿಗಳಿಗೆ ಅನುಕೂಲವಾಗಿದೆ. ಕೇಂದ್ರದಲ್ಲಿ ಎರಡು ಯಂತ್ರಗಳು ಇದ್ದು ದಿನಕ್ಕೆ ಓರ್ವ ರೋಗಿಯ ಚಿಕಿತ್ಸೆಗಾಗಿ ಕನಿಷ್ಠ ಎರಡು ಗಂಟೆ ಸಮಯ ಬೇಕಾಗುತ್ತದೆ. ಅಂದರೆ ದಿನಕ್ಕೆ ಆರೇಳು ರೋಗಿಗಳಿಗೆ ಇಲ್ಲಿ ಚಿಕಿತ್ಸೆ ಸಿಗುತ್ತದೆ’ ಎಂದರು,
‘ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದರು.

ತಹಶೀಲ್ದಾರ್‌ ವಾಸುದೇವಸ್ವಾಮಿ, ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ, ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಕಾಂತ ಕಾಟೆವಾಲೆ, ಸ್ತ್ರೀರೋಗ ತಜ್ಞ ಡಾ.ಉಮೇಶ ಮಾತನಾಡಿದರು.  ಸಿದ್ದು, ಕುಮಾರಸ್ವಾಮಿ ಹಿರೇಮಠ, ತಿಮ್ಮರೆಡ್ಡಿ ಮರಡ್ಡಿ, ವಿಶ್ವನಾಥರೆಡ್ಡಿ, ನವೀನ ಬೆಳ್ಳಟ್ಟಿ, ವಿಜಯ ಮೆಕ್ಕಿ, ಲಂಕೆಪ್ಪ ಶೆರಸೂರಿ, ಅನಿಲ ಮುಳಗುಂದ, ಮಂಜುನಾಥ ಗೊರವರ, ವಿಶಾಲ ಬಟಗುರ್ಕಿ, ಗಿರೀಶ ಚೌರೆಡ್ಡಿ ಇದ್ದರು.

Leave a Reply

Your email address will not be published. Required fields are marked *

error: Content is protected !!