ಉದಯವಾಹಿನಿ, ಸೇಡಂ : ತಾಲೂಕಿನ ಮುಗನೂರ್ ಮತ್ತು ಕಾಚೂರ ಗ್ರಾಮಗಳ ಮುಖ್ಯ ರಸ್ತೆ ಮಧ್ಯೆ ಎರಡು ಬೃಹತ ತಗ್ಗು ಗುಂಡಿ ಬಿದ್ದಿದ್ದು ಬೈಕ್ ಸವಾರರಿಗೆ ರೈತರಿಗೆ ಹಾಗೂ ಬಸ್ ಹೋಗಲು ತೊಂದರೆ ಆಗುತ್ತಿದ್ದು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ರಸ್ತೆ ದುರಸ್ತಿಗೆ ಮುಂದಾಗಬೇಕೆAದು ಯಡಗಾ ಗ್ರಾಮ್ ಪಂಚಾಯತ ಅಧ್ಯಕ್ಷರಾದ ಮಲ್ಲಕಾರ್ಜುನಯ್ಯ ಎಸ್. ಸ್ವಾಮಿ ಬಿಬ್ಬಳ್ಳಿ ರವರು ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಗಳು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.ಈ ವೇಳೆಯಲ್ಲಿಶರತ್ ಮುಗಮೂರ್ ಮಲ್ಲಪ ಪೂಜಾರಿ ಮತ್ತು ಸುರೇಶ್ ಸಾತ್ನೂರು ಇದ್ದರು.
