ಉದಯವಾಹಿನಿ, ಬೆಂಗಳೂರು: ಪಾದಯಾತ್ರೆಯನ್ನು ಮುಂದುವರೆಸಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯಘಟಕಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವರೂ ಆಗಿರುವ ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ತಲೆಕೆಡಿಸಿಕೊಳ್ಳದೆ.ಈಗಾಗಲೇ ತೀರ್ಮಾನಿಸಿರುವಂತೆ ಆ.3ರಿಂದ (ಶನಿವಾರ) ಮೈಸೂರುವರೆಗೆ ಪಾದಯಾತ್ರೆಯನ್ನು ನಡೆಸಿ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭ್ರಷ್ಟಾಚಾರವನ್ನು ಜನರಿಗೆ ಮನವರಿಕೆ ಮಾಡುವಂತೆ ಸೂಚನೆ ಕೊಡಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿದ್ದಾರೆ.
ಸಂಸತ್ ಭವನದ ಶ್ರೀ HD ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಭೇಟಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿ, ಶ್ರೀ ರಾಧಮೋಹನ್ ದಾಸ್, ಶ್ರೀ BY ವಿಜಯೇಂದ್ರ, ಶ್ರೀ ಬಂಡೆಪ್ಪ ಕಾಶೆಂಪೂರ್, ಶ್ರೀ ಮಲ್ಲೇಶ್ ಬಾಬು ಸಭೆ ಪಾದಯಾತ್ರೆ ಗ್ಗೆ ಮಹತ್ವದ ಚರ್ಚೆ
ಜೆಡಿಎಸ್ ಪಾದಯಾತ್ರೆಗೆ ಏಕೆ ವಿರೋಧಪಡಿಸುತ್ತದೆ ಎಂಬುದು ನಮಗೆ ಗೊತ್ತಿದೆ. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅವರು ಕೈಜೋಡಿಸಿದರೆ ಜೋಡಿಸಲಿ, ಇಲ್ಲದಿದ್ದರೆ ಬಿಡಲಿ, ಅವರ ನೈತಿಕ ಬೆಂಬಲವನ್ನೂ ನಿರೀಕ್ಷಿಸದೇ ಬಿಜೆಪಿ ವತಿಯಿಂದಲೇ ಪಾದಯಾತ್ರೆಯನ್ನು ಆಯೋಜಿಸಬೇಕೆಂದು ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
