ಉದಯವಾಹಿನಿ, ನರೇಗಲ್: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂ. ಗುರು ಅನ್ನದಾನ ಸ್ವಾಮಿಗಳ 47ನೇ ಪುಣ್ಯಸ್ಮರಣೋತ್ಸವ, ತಾಯಂದಿರಿಗೆ ಸನ್ಮಾನ, ಮಹಿಳಾ ಆರೋಗ್ಯ ಶಿಬಿರ, ವನಮಹೋತ್ಸವ, 501 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅಧ್ಯಾತ್ಮ ಪ್ರವಚನದ ಮಂಗಲೋತ್ಸವ, ಬೆಳ್ಳಿ ರಥೋತ್ಸವ ಕಾರ್ಯಕ್ರಮಗಳು ಆಗಸ್ಟ್ 11, 12ರಂದು ನಡೆಯಲಿವೆ.
‘ಆ.11ಕ್ಕೆ ಬೆಳಿಗ್ಗೆ 9.30ಕ್ಕೆ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಸಂಕನೂರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಮಹಿಳೆಯರ ಆರೋಗ್ಯ ತಪಾಸಣಾ ಹಾಗೂ ಎಲುಬಿನ ಸಾಂದ್ರತೆ ತಪಾಸಣಾ ಶಿಬಿರ ನಡೆಯಲಿದೆ. 11 ಗಂಟೆಗೆ ಅರಣ್ಯ ಇಲಾಖೆ, ಹಾಲಕೆರೆ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ವನಮಹೋತ್ಸವ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಗಣಾರಾಧನೆ, ಸಂಜೆ 7 ಗಂಟೆಗೆ ಪುಣ್ಯಸ್ಮರಣೋತ್ಸವ ಹಾಗೂ ಅಧ್ಯಾತ್ಮ ಪ್ರವಚನದ ಮಂಗಲೋತ್ಸವ ನಡೆಯಲಿದೆ’ ಎಂದು ಶ್ರೀಮಠದ ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಂದವಾಡಗಿಯ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ, ಒಪ್ಪತ್ತೇಶ್ವರ ಸ್ವಾಮಿಮಠದ ನಿರಂಜನಪ್ರಭು ಸ್ವಾಮೀಜಿ, ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಗದಗ-ರಾಜೂರ ಹಿರೇಮಠದ ಅಭಿನವ ಪಂಚಾಕ್ಷರ ಸ್ವಾಮೀಜಿ, ಸೊರಟೂರ ಹಿರೇಮಠದ ಫಕೀರೇಶ್ವರ ಶಿವಾಚಾರ್ಯ, ಗದಗ ಅಡವೀಂದ್ರಸ್ವಾಮಿ ಮಠದ ಮಹೇಶ್ವರ ಸ್ವಾಮೀಜಿ, ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಕಳಕಪ್ಪ ಜಿ. ಬಂಡಿ ಪಾಲ್ಗೊಳ್ಳಲಿದ್ದಾರೆ. ನಂತರ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಂಗಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
