ಉದಯವಾಹಿನಿ, ಬೆಂಗಳೂರು: ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಗಳಿಂದ ರಾಜ್ಯಸರ್ಕಾರ ಮುಜುಗರಕ್ಕೆ ಒಳಗಾಗಿರುವ ನಡುವೆಯೇ ಪೊಲೀಸ್‌‍ ಅಧಿಕಾರಿ ಅಸಹಜ ಸಾವು ರಾಜ್ಯಸರ್ಕಾರಕ್ಕೆ ಸಾಕಷ್ಟು ಇರಿಸುಮುರಿಸು ಉಂಟುಮಾಡಿದೆ.ಯಾದಗಿರಿ ಪಿಎಎಸ್‌‍ಐ ಪರಶುರಾಮ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಪರಶುರಾಮ್ ಅವರ ಪತ್ನಿ ಶ್ವೇತಾ ಅವರು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸಂಗೀತ ಅವರಿಗೆ ದೂರು ನೀಡಿದ್ದು, ತಮ ಪತಿಗೆ ಸ್ಥಳ ನಿಯೋಜನೆಗಾಗಿ ಹಣ ನೀಡುವಂತೆ ಸ್ಥಳೀಯ ಶಾಸಕ ಚೆನ್ನರೆಡ್ಡಿ ಪಾಟೀಲ್‌ ಮತ್ತು ಅವರ ಪುತ್ರ ಪದೇಪದೇ ಒತ್ತಡ ಹೇರುತ್ತಿದ್ದರು.

ಇದರಿಂದ ಖಿನ್ನತೆಗೆ ಒಳಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ. ಆಸ್ಪತ್ರೆಯ ಮುಂಭಾಗ ದಲ್ಲೇ ಧರಣಿ ನಡೆಸಿದ ಶ್ವೇತಾ, ಶಾಸಕ ಚೆನ್ನರೆಡ್ಡಿ ಪಾಟೀಲ್‌ ಸ್ಥಳಕ್ಕೆ ಆಗಮಿಸ ಬೇಕೆಂದು ಪಟ್ಟು ಹಿಡಿದಿದ್ದರು.ಸಂಬಂಧಿಕರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರ ದುಡ್ಡಿನ ಆಸೆ ಹೆಚ್ಚಾಗಿದೆ. 7 ತಿಂಗಳಲ್ಲೇ ವರ್ಗಾವಣೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಡೆದು 17 ಘಂಟೆಗಳಾದರೂ ಪೊಲೀಸರು ದೂರು ದಾಖಲಿಸಿಲ್ಲ. ಇದನ್ನು ವಿರೋಧಿಸಿ ವಿವಿಧ ಸಂಘಟನೆ ಗಳು ರಾಷ್ಟ್ರೀಯ ಹೆದ್ದಾರಿ -150 ರಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

 

Leave a Reply

Your email address will not be published. Required fields are marked *

error: Content is protected !!