ಉದಯವಾಹಿನಿ, ಬಿಹಾರ: ಗರ್ಭ ಧರಿಸಿದ ಮೇಕೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ವೈಶಾಲಿ ಜಿಲ್ಲೆಯಲ್ಲಿ ಮೂವರು, ಗರ್ಭಿಣಿ ಮೇಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಗ್ರಾಮಸ್ಥರು ಆರೋಪಿಗಳಲ್ಲಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೇಕೆಯ ಕಿರುಚಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದಾಗ ಜನರನ್ನು ಕಂಡ ಇಬ್ಬರು ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಓರ್ವನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಮತ್ತೊಂದೆಡೆ, ಮೇಕೆಯ ಸ್ಥಿತಿ ತುಂಬಾ ಗಂಭೀರವಾಗಿದ್ದು ಅದರ ದೇಹದಿಂದ ರಕ್ತ ಹರಿಯುತ್ತಿತ್ತು. ಮೇಕೆಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿ ತನ್ನ ಹೆಸರನ್ನು ಸೋನು ಕುಮಾರ್ ಎಂದು ಹೇಳಿದ್ದಾನೆ. ವರದಿಯ ಪ್ರಕಾರ ಸೋನು ಮತ್ತು ಅವನ ಇಬ್ಬರು ಸಹಚರರು ಕಳ್ಳಬಟ್ಟಿ ಕುಡಿದು ನಂತರ ಅಮಲಿನಲ್ಲಿ ಈ ಘೋರ ಅಪರಾಧ ಮಾಡಿದ್ದಾರೆ ಎಂದು ಹೇಳಿದ್ದಾರೆ. ಗಲಾಟೆಯ ನಂತರ ಅವನ ಇಬ್ಬರು ಸಹಚರರು ಓಡಿ ಹೋಗಿದ್ದು ಈತ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿ ಸೋನುವನ್ನು ಠಾಣೆಗೆ ಕರೆದೊಯ್ದಿದ್ದು ವಿಚಾರಣೆಗೆ ಒಳಪಡಿಸಿ ಆತನ ಇಬ್ಬರು ಸಹಚರರನ್ನು ಹುಡುಕುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!