ಉದಯವಾಹಿನಿ, ಕನಕಪುರ: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ತೀವ್ರ ವಿರೋಧಿಸಿ ಕನಕಪುರ ತಹಶೀಲ್ದಾರ್ ಮುಖೇನ ಮುಖ್ಯಮಂತ್ರಿಗಳಿಗೆ ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ನಾಗಾರ್ಜುನ್ ಗೌಡ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ನಾಗರ್ಜುನ್‌ಗೌಡ ತಮ್ಮ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ವ್ಯಾಪ್ತಿಗೆ ತೆಗೆದುಕೊಂಡು ಅಭಿವೃದ್ಧಿ ಮಾಡುವ ಬಗ್ಗೆ ಹೇಳಿದ್ದಿರಿ ಅಭಿವೃದ್ಧಿ ನೆಪದಲ್ಲಿ ಐತಿಹಾಸಿಕ ರಾಮನಗರ ಹೆಸರು ಕೈ ಬಿಡುವ ಪ್ರಸ್ತಾಪ ಅತ್ಯಂತ ಖಂಡನೀಯ. ನೂರಾರು ವರ್ಷಗಳ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ ಹಿನ್ನೆಲೆಯ ಆ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾವಣೆ ನಾವು ಸಹಿಸುವುದಿಲ್ಲ. ರಾಮನ ಬೆಟ್ಟದ ಮೂಲಕ ಇಡೀ ದೇಶದಲ್ಲಿ ಗುರುತಿಸಿಕೊಂಡಿರುವ ನಗರವಿದು.ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ರಾಮದುರ್ಗ ಅನ್ನೋ ಹೆಸರಲ್ಲಿ ಆಡಳಿತ ನಡೆಸಿದ ಕೆಂಪೇಗೌಡರ ಐತಿಹಾಸಿಕ ಸತ್ಯವನ್ನು ಅಳಿಸುವ, ಅವಮಾನಿಸುವ ಘೋರ ಅಪರಾಧವಿದು.ಸ್ವಾತಂತ್ರ‍್ಯ ನಂತರ ವಿಧಾನ ಸಭೆ ನಿರ್ಮಾತ್ರ ಕೆಂಗಲ್ ಹನುಮಂತಯ್ಯರು ರಾಮನಗರದ ಪರ ಪ್ರಮುಖರುಗಳನ್ನು ಕರೆದು ಚರ್ಚಿಸಿ “ರಾಮನಗರ” ಅಂತ ನಾಮಕರಣ ಮಾಡಿ ಅಲ್ಲಿಯ ಭವ್ಯ ಪರಂಪರೆ,ಅಲ್ಲಿಯ ಜನತೆಯ ಭಾವನಾತ್ಮಕ ವಿಷಯಕ್ಕೆ ಗೌರವ ನೀಡಿದ್ದರು.
ತಮ್ಮ ಸರ್ಕಾರ ಇಂತಹ ಹೆಸರನ್ನು ತೆಗೆಯುತ್ತಿರುವುದು ಆ ಎಲ್ಲ ಪುಣ್ಯ ಪುರುಷರ,ನಾಡು ನಿರ್ಮಾತೃರಿಗೆ ಮಾಡುವ ಘೋರ ಅವಮಾನ… ನಾಡಿನ ಭವ್ಯ ಪರಂಪರೆಗೆ ಬಗೆಯುವ ಅನ್ಯಾಯ, ದ್ರೋಹ.ಟಿಪ್ಪುವಿನ ಆಳ್ವಿಕೆಯಲ್ಲಿ ಶಂಶೆರಾಬಾದ್ ಅನ್ನೋ ಹೆಸರು ಇಡುವ ಪ್ರಯತ್ನ ಮಾಡಿದಾಗ ಅಲ್ಲಿಯ ಜನತೆ ತೀವ್ರ ವಿರೋಧ ಮಾಡಿದ್ದರು ಅನ್ನೋ ಮಾಹಿತಿ ಇದೆ.ಈ ಹೆಸರು ಬದಲಾವಣೆಗೆ ಕೈಹಾಕಿ ಸ್ವಲ್ಪ ಅವಧಿಯಲ್ಲಿ ಟಿಪ್ಪು ಅಧಿಕಾರ ಜೊತೆಗೆ ಜೀವ ಕಳೆದುಕೊಂಡ ಅನ್ನುವ ವಿಚಾರಗಳು ಇವೆ.
ಈ ಎಲ್ಲ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಸ್ವಹಿತಾಸಕ್ತಿಗಾಗಿ,ಕೆಲವು ಪಟ್ಟಭದ್ರ ದುಷ್ಟ ಶಕ್ತಿಗಳ ಲಾಭಕ್ಕೆ ಜಿಲ್ಲೆಯ ಜನತೆಯ ಆಶಯಕ್ಕೆ ವಿರುದ್ಧವಾಗಿ ತಮ್ಮ ರಾಜಕೀಯ ಕಾರಣಗಳಿಗಾಗಿ ಹೆಸರು ಬದಲಾವಣೆ ಅತ್ಯಂತ ಖಂಡನೀಯವಾಗಿದ್ದು ತಕ್ಷಣ ಈ ನಿರ್ಣಯ ವಾಪಸ್ ಪಡೆಯಲು ಆಗ್ರಹಿಸುತ್ತೇವೆ.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯವೆಂದು ಈ ಮೂಲಕ ತಿಳಿಸುತ್ತೇವೆ.
ಈ ಸಂದರ್ಭದಲ್ಲಿ ಸಂಘಟನಾ ಜಿಲ್ಲಾ ಕಾರ್ಯದರ್ಶಿ ನವೀನ್ ಕೆಎನ್, ತಾಲೂಕು ಉಪಾಧ್ಯಕ್ಷ ಮಹೇಶ್ ಗೌಡ, ಕಾರ್ಯಕರ್ತರುಗಳಾದ ದುರ್ಗೇಶ್, ಮೋಹನ್, ಚೀರಣಕುಪ್ಪೆ ಕುಮಾರ್ , ಹರ್ಷವರ್ಧನ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!