ಉದಯವಾಹಿನಿ, ಬೆಂಗಳೂರು: ರಾಜ್ಯವಲ್ಲದೇ ತಮಿಳುನಾಡಿನ ಹಲವು ಭಾಗಗಳಲ್ಲಿ ೬೬ ಕ್ಕೂ ಕನ್ನ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕನ್ನಗಳ್ಳ ಕಾರ್ತಿಕ್ ಕುಮಾರ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ನನ್ನು ಬಂಧಿಸುವಲ್ಲಿ ಪುಲಕೇಶಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ೨೦೦೪ನೇ ಸಾಲಿನಿಂದ ರಾಜ್ಯದಲ್ಲಿ ೩೮ ಹಾಗೂ ನೆರೆಯ ತಮಿಳುನಾಡಿನಲ್ಲಿನ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಉದ್ಯೋಷಣೆ ಮತ್ತು ವಾರೆಂಟ್‌ಗಳನ್ನು ಹೊರಡಿಸಿದ್ದ ಕಲ್ಯಾಣನಗರದ ಪ್ರಕೃತಿ ಲೇಔಟ್ ನ ಕಾರ್ತಿಕ್ ಕುಮಾರ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್(೩೫) ನನ್ನು ನಿನ್ನೆ ಬೆಳಗ್ಗೆ ಖಚಿತವಾದ ಮಾಹಿತಿಯನ್ನು ಆಧರಿಸಿ ಲಿಂಗರಾಜಪುರದ ಆಂಡರ್‌ಪಾಸ್ ಬಳಿ ಬಂಧಿಸಲಾಗಿದೆ. . ಪುಲಕೇಶಿನಗರ ಉಪ ವಿಭಾಗದ ಎಸಿಪಿ ಸಿ.ಆರ್. ಗೀತಾ ತಿಳಿಸಿದ್ದಾರೆ.
ಹಳೇ ಆರೋಪಿಯಾಗಿದ್ದ ಕಾರ್ತಿಕ್ ವಿರುದ್ಧ ಬೆಂಗಳೂರು ನಗರ, ರಾಜ್ಯದ ವಿವಿಧ ಜಿಲ್ಲೆಯ ಮತ್ತು ತಮಿಳುನಾಡಿನ ಪೊಲೀಸ್ ಠಾಣೆಗಳಲ್ಲಿ ಒಟ್ಟು ೬೬ ಅಪರಾಧ ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಆತನನ್ನು
ಪುಲಕೇಶಿನಗರ ಇನ್ಸ್‌ಪೆಕ್ಟರ್ ಗೋವಿಂದರಾಜು ಮತ್ತವರ ಸಿಬ್ಬಂದಿ ಬಂಧಿಸಿದೆ.
