ಉದಯವಾಹಿನಿ, ಕೋಲಾರ: ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಯನ್ನು ಖಂಡಿಸಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ತಾರತಮ್ಯ ನಡೆಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೇಸ್ ,ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ಜಿಲ್ಲಾ ಕುರುಬರ ಸಂಘ ಮತ್ತು ಮುಖಂಡರಿಂದ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು,
ನಗರದಲ್ಲಿ ಸಂಘಟಿತರಾದ ಮುಖಂಡರು, ನೊರಾರು ಮಂದಿ ಕಾರ್ಯಕರ್ತರು ನಗರದ ಕುವೆಂಪು ಪಾರ್ಕ್ ನಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ, ಕೈಯಲ್ಲಿ ಕಾಂಗ್ರೇಸ್ ಬಾವುಟ ಹಾಗೂ ರಾಜ್ಯಪಾಲರ ವಿರುದ್ದ ಭಿತ್ತಿಪತ್ರಗಳು ಹಿಡಿದು ಬಿಜೆಪಿ ವಿರುದ್ದ ಘೋಷಣೆಗಳು ಕೊಗುತ್ತ ಕೆಲಕಾಲ ರಸ್ತೆ ತಡೆ ನಡೆಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್,ಅನಿಲ್ ಕುಮಾರ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಜನಪ್ರಿಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ಕೇಂದ್ರದಲ್ಲಿ ಬಿಜೆಪಿ ನೇತ್ರತ್ವದ ಸರ್ಕಾರವು ಪಿತೂರಿ ನಡೆಸುತ್ತಿದೆ. ರಾಜ್ಯದಲ್ಲಿ ಸಂವಿಧಾನ ಬದ್ದವಾಗಿ ೧೩೬ ಶಾಸಕರು ನೀಡಿರುವ ಬೆಂಬಲದಿಂದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯನವರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಾಚಿಕೆ ಇಲ್ಲದೆ ಕೈ ಜೋಡಿಸಿವೆ ಎಂದು ವ್ಯಂಗವಾಡಿದರು.
ಮುಡಾ ಪ್ರಕರಣ ಬಳಿಸಿ ಕೊಂಡು ಸಿದ್ದರಾಮಯ್ಯನವರನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ಅಣತಿಯಂತೆ ಹಮ್ಮಿ ಕೊಂಡಿರುವ ಮೈಸೂರು ಪಾದಯಾತ್ರೆ ಅಂದೋಲನವು ಅರ್ಥಹೀನ ಎಂದರು.
ಜಿಲ್ಲಾ ಕಾಂಗ್ರೇಸ್ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ ಓರ್ವ ಮುಖ್ಯ ಮಂತ್ರಿಗಳಿಗೆ ರಾಜ್ಯಪಾಲರು ಷೋಕಾಸ್ ನೋಟಿಸ್ ಜಾರಿ ಮಾಡಿರುವುದು ರಾಜ್ಯದ ಇತಿಹಾಸದಲ್ಲೇ ಇಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಲ್.ಎ. ಮಂಜುನಾಥ್ ನಗರಘಟಕದ ಅಧ್ಯಕ್ಷ ಪ್ರಸಾದ್ ಬಾಬು .ಕುಡಾ ಅಧ್ಯಕ್ಷ ಮಹ್ಮದ್ ಹನಿಫ್, ನಗರಸಭೆ ಮಾಜಿ ಸದಸ್ಯ ಸಿ.ಸೋಮಶೇಖರ್, ಕುರುಬರ ಸಂಘದ ಮುಖಂಡ ಅಂಜನಿ ಸೋಮಣ್ಣ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಕುಡಾ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೊಂ, ಗ್ಯಾರೆಂಟಿ ಅನುಷ್ಠನ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಹಾಲು ಒಕ್ಕೂಟದ ನಿರ್ದೇಶಕ ಷರೀಫ್, ಸೀಸಂದ್ರ ಗೋಪಾಲ್, ಮೈಲಂಡಹಳ್ಳಿ ಮುರಳಿ, ಉಮಶಂಕರ್, ಸಾಧಿಕ್ ಪಾಷ, ರಾಜು, ನಗರಸಭೆ ಮಾಜಿ ಸದಸ್ಯ ಬಾಬ್ ಜಾನ್, ಜಾಫರ್ ಪಾಷ, ಕಾಂಗ್ರೇಸ್ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ,ರಾಮಯ್ಯ,ಜಿ.ಕೆ.ಜಯರಾಮ್, ಗೋವಿಂದಪ್ಪ, ಚಿಟ್ಟಿ ರಘು, ಸರಸ್ಪತಮ್ಮ, ರತ್ನಮ್ಮ, ಮಂಜುನಾಥ್, ಮುಂತಾದವರು ಇದ್ದರು.
