ಉದಯವಾಹಿನಿ, ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದ ಬೆಂಗಳೂರಿನ ವಿಜಯನಗರ ನಿವಾಸಿ ಆಯುಶ್ ಡಿಗ್ಗಿ ರಾಜ್ಯ ಮಟ್ಟದ ಅಥ್ಲೇಟಿಕ್ಸನಲ್ಲಿ ಚಿನ್ನದ ಪದಕ ಪಡೆದಿದ್ದಾನೆ.
ಆಗಷ್ಟ್ 3 ಮತ್ತು 4ರಂದು ಬೆಂಗಳೂರಿನ ಕಂಠೀರವ ಕೀಡಾಂಗಣದಲ್ಲಿ ಕರ್ನಾಟಕ ಅಥ್ಲೇಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕಿಡ್ಸ್ ಅಥ್ಲೇಟಿಕ್ಸ್ ಮೀಟ್ ಸ್ಪರ್ಧೆಯ 8 ವರ್ಷಗಳ ವಯೋಮಾನದ ಒಳಗಿನ ಮಕ್ಕಳ ಲಾಂಗ್ ಜಂಪ್‍ನಲ್ಲಿ 2.92 ಮೀಟರ್ ಉದ್ದ ಜಿಗಿಯುವ ಮೂಲಕ ಚಿನ್ನದ ಪದಕ ಪಡೆದಿದ್ದಾನೆ.
ಬೆಂಗಳೂರಿನ ವಿಜಯನಗರದ ನಿವಾಸಿಗಳಾಗಿರುವ ರುದ್ರವಾಡಿ ಗ್ರಾಮದ ಶಿವಲಿಂಗಪ್ಪ ಮತ್ತು ಸ್ನೇಹಾ ದಂಪತಿಯ ಮಗನಾದ ಆಯುಶ್ 2ನೇ ತರಗತಿಯಲ್ಲಿ ಓದುತ್ತಿದ್ದು ದಿ ನ್ಯೂ ಕೇಂಬ್ರಿಡ್ಜ್ ಆಂಗ್ಲ್ ಮಾಧ್ಯಮ ಶಾಲೆಯನ್ನು ಅಥ್ಲೇಟಿಕ್ಸ್‍ನಲ್ಲಿ ಪ್ರತಿನಿಧಿಸಿದ್ದ.
ವಿದ್ಯಾರ್ಥಿಯ ಸಾಧನೆಗೆ ಪಾಲಕರು, ಶಾಲೆಯವರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಅಥ್ಲೇಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕಿಡ್ಸ್ ಅಥ್ಲೇಟಿಕ್ಸ್ ಮೀಟ್ ಸ್ಪರ್ಧೆಯು ಕರ್ನಾಟಕದಾದ್ಯಂತದ ಯುವ ಕ್ರೀಡಾಪಟುಗಳನ್ನು ಒಟ್ಟುಗೂಡಿಸಿತು ಅಲ್ಲದೇ ಅವರ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ವೇದಿಕೆಯನ್ನು ಒದಗಿಸಿತು.

Leave a Reply

Your email address will not be published. Required fields are marked *

error: Content is protected !!