ಉದಯವಾಹಿನಿ, ಬಂಗಾರಪೇಟೆ: ಯಾದಗಿರಿ ಠಾಣೆ ಪಿಎಸ್‌ಐ ಪರಶುರಾಮ್ ಅವರ ಅನುಮಾನಾಸ್ಪದ ಸಾವಿಗೆ ಕಾರಣರಾದ ಯಾದಗಿರಿ ಶಾಸಕ ಹಾಗೂ ಅವರ ಪುತ್ರನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಮಾಜ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಮಾತನಾಡುತ್ತಾ, ಯಾದಗಿರಿ ಠಾಣೆಗೆ ವರ್ಗಾವಣೆಯಾಗಿ ಒಂದು ವಷ ಕೂಡ ಕಳೆದಿಲ್ಲ. ಏಳು ತಿಂಗಳಲ್ಲೇ ಮತ್ತೆ ವರ್ಗಾವಣೆ ಮಾಡಲಾಗಿದೆ. ಆದರೆ ನಗರ ಠಾಣೆಯಲ್ಲಿ ಮುಂದುವರೆಲು ೩೦ ಲಕ್ಷ ನೀಡಬೇಕು ಎಂದು ಶಾಸಕ ಹಾಗೂ ಅವರ ಪುತ್ರ ಬೇಡಿಕೆಯಿಟ್ಟಿದ್ದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪಿಎಸ್‌ಐ ವಸತಿ ಗೃಹದಲ್ಲಿ ಮೃತಪಟ್ಟಿದ್ದಾರೆ.ಈ ಸಾವಿಗೆ ಶಾಸಕ ಹಾಗೂ ಅವರ ಪುತ್ರ ಕಾರಣವೆಂದು ಆರೋಪಿಸಿದರು.
ಒಬ್ಬ ನಿಷವಂತ ೩೬ ವಷದ ಅಧಿಕಾರಿಯ ಆತ್ಮಹತ್ಯೆಗೆ ಶರಣಾಗಿದ್ದಾನೆ ಇದು ತುಂಬಾ ನೋವಿನ ಸಂಗತಿ, ಸರ್ಕಾರ ಭ್ರಷಚಾರದಲ್ಲಿ ತೊಡಗಿದ್ದು ವರ್ಗಾವಣೆ ದಂಧೆಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದರು.
ಅವರ ಪತ್ನಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಂತೆ ದೂರು ಕೊಟ್ಟರು ಪೊಲೀಸರು ಎಫ್‌ಐಆರ್ ದಾಖಲಿಸಲು ಮುಂದಾಗಲಿಲ್ಲ ನಂತರ ಇದೇ ವಿಷಯದ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ೧೮ ಗಂಟೆಗಳ ನಂತರ ಎಫ್‌ಐಆರ್ ದಾಖಲಿಸುತ್ತಾರೆ. ಹಾಗಾಗಿ ಕರ್ನಾಟಕ ದಲಿತ ಸಮಾಜ ಸೇನೆ ವತಿಯಿಂದ ಅಲ್ಲಿನ ಸ್ಥಳಿಯ ಶಾಸಕ ಮತ್ತು ಆತನ ಮಗನನ್ನು ಕೂಡಲೇ ಬಂಧಿಸಬೇಕು ಮತ್ತು ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ ಇಲ್ಲವಾದ ಪಕ್ಷದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!