ಉದಯವಾಹಿನಿ, ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರ ಸಮವಸ್ತ್ರ ಬದಲಾವಣೆಗೆ ಸಂಪೂರ್ಣ ಸಿದ್ಧತೆ ಆಗಿದ್ದು, ಶೀಘ್ರದಲ್ಲಿಯೇ ನೀಲಿ ಬಣ್ಣದಲ್ಲಿ ಪೌರಕಾರ್ಮಿಕರು ಕಾಣತೊಡಗಿಸಲಿದ್ದಾರೆ.
ಈ ಹಿಂದೆ ಸ್ವತಃ ಬಿಬಿಎಂಪಿ ಪೌರಕಾರ್ಮಿಕರೇ ತಮ್ಮ ಸಮವಸ್ತ್ರ ಬದಲಾವಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು. ಅದರಂತೆಯೇ ಈಗ ಹೊಸ ಸಮವಸ್ತ್ರ ಜಾರಿಗೆ ಬಂದಿದ್ದು, ನೀಲಿ ಬಣ್ಣದ ಸಮವಸ್ತ್ರವು ತಯಾರಿ ಗೊಂಡಿದೆ.
ಪಾಲಿಕೆಯಿಂದ ಮಹಿಳೆ ಪೌರ ಕಾರ್ಮಿಕರಿಗೆ ಎರಡು ಜೊತೆ ಸೀರೆ, ಟೋಪಿ, ಸ್ವೇಟರ್ ಹಾಗೂ ಕೋಟ್ ಗೆ ೪೮೧೧ ರೂಪಾಯಿ ನಿಗದಿ ಮಾಡಲಾಗಿದೆ.
ಅದೇ ರೀತಿ, ಪುರುಷ ಪೌರ ಕಾರ್ಮಿಕರಿಗೆ ಟ್ರ್ಯಾಕ್ ಪ್ಯಾಂಟ್, ಟೀ ಶರ್ಟ್,ಟೋಪಿಗೆ ೩೫೭೮ ರೂ,ನಿಗದಿಸಿ ಈಗಾಗಲೇ ಟೆಂಡರ್ ಸಹ ಕರೆದಿದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ದಿನದಿಂದಲೇ ಬಿಬಿಎಂಪಿಯ ಪೌರ ಕಾರ್ಮಿಕರು ಹೊಸ ಬಣ್ಣದ ಸಮವಸ್ತ್ರ ಧರಿಸಿ ರಸ್ತೆಗೆ ಇಳಿಯಲಿದ್ದಾರೆ.
