ಉದಯವಾಹಿನಿ, ಸಿರವಾರ: ಚುನಾವಣೆ ಜರುಗಿ ೨ ವರ್ಷ.೮ ತಿಂಗಳು ನಂತರ ಕೊನೆಗೂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದೂ ಬಿಜೆಪಿಗೆ ಸುಲಭವಾಗಿ ಉಪಾದ್ಯಕ್ಷ ಸ್ಥಾನ ಒದಗಿ ಬಂದಿದ್ದರೆ, ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಗೆ ಸುಲಭವಾಗಿದ್ದರೂ ಅನೇಕರು ಆಕಾಂಕ್ಷಿಗಳಾಗಿರುವದರಿಂದ ಯಾವ ಸದಸ್ಯರಿಗೆ ಸಚಿವ- ಶಾಸಕರು ಆಶಿರ್ವಾದ ದೊರೆಯಿತ್ತದೋ ಅವರು ಅದ್ಯಕ್ಷರಾಗುತ್ತಾರೆ.ಕರ್ನಾಟಕ ಪುರಸಭೆಗಳ ಕಾಯಿದೆ, ೧೯೬೪ರ ಸೆಕ್ಷನ ೪೨ರ ಪ್ರಕಾರ ಮತ್ತು ಕರ್ನಾಟಕದ ನಿಯಮ ೧೩-ಎ ಮತ್ತು ೧೩ರ ಅಡಿಯಲ್ಲಿ ಕ ಕರ್ನಾಟಕದ ನಗರ/ ಪುರಸಭೆಯ ಕೌನ್ಸಿಲ್‌ಗೆ ಸಂಬಂಧಿಸಿದಂತೆ ವಿವಿಧ ವರ್ಗಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಿ ಚುನಾವಣೆ ತಿದ್ದುಪಡನಿಯಮಗಳು, ೨೦೨೪ರ ಪ್ರಕಾರ ಆದೇಶ ಹೊರಡಿಸಿದೆ.
ಸಿರವಾರ ಪ.ಪಂ ಒಟ್ಟು ೨೦ ಜನ ಸದಸ್ಯರ ಬಲದಲ್ಲಿ ಕಾಂಗ್ರೇಸ್ ೯, ಬಿಜೆಪಿ ೬, ಜೆಡಿಎಸ್೩, ಪಕ್ಷೇತರರು ೨ ಸದಸ್ಯರು ಇದಾರೆ. ಇಬ್ಬರು ಪಕ್ಷೇತರರ ಪೈಕಿ ವಾರ್ಡ ನಂ೧೯ ಸದಸ್ಯ ಹನುಮಂತಿ ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿ, ಬಿಜೆಪಿ ಪಾಳೇಯದಲ್ಲಿದ್ದಾರೆ. ಜೆಡಿಎಸನ ೩ ಜನ ಕೂಡ ಈ ಹಿಂದೆ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಬಿಜೆಪಿ ಪಾಳಯಕ್ಕೆ ೧೦ ಸದಸ್ಯರ ಬಲ ಹೊಂದಿದೆ.
ಅತ್ತ ಕಾಂಗ್ರೆಸ ತನ್ನ ೯ ಸದಸ್ಯರು, ವಾರ್ಡ ನಂ ೦೮ ರ ಸದಸ್ಯ ಮಾರ್ಕಪ್ಪ ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿದ್ದಾರೆ ಒಟ್ಟ ೧೦ ಸ್ಥಾನಗಳು ಶಾಸಕ ಮತ್ತು ಸಂಸದರ ಬೆಂಬಲದೊಂದಿಗೆ ೧೨ ಮತಗಳಾಗುತ್ತವೆ ಬಹುಮತಕ್ಕೆ ೧೧ ಮತ ಬೇಕು.
ಲಕ್ಷ್ಮಿಗೆ ಒಲಿದ ಅದೃಷ್ಠ:– ವಾರ್ಡ ನಂ ೦೫ ಲಕ್ಷ್ಮಿ ಆದೇಪ್ಪ ಅವರು ಜಿದಾಜಿದಿನ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ವಿಜೇತರಾದರು, ಈಗ ಎಸ್ ಟಿ ಮಹಿಳೆ ಮಿಸಲಾಗಿರುವುದರಿಂದ ೨೦ ಸದಸ್ಯರಲಿ ಇವರು ಒಬ್ಬರೆ ಎಸ್ ಟಿ ಮಹಿಳೆ ಆಗಿರುವ ಕಾರಣ ಬಯಸದೆ ಭಾಗ್ಯ ಒಲಿದಿದೆ. ಆಕಾಂಕ್ಷಿಗಳು :- ಅದ್ಯಕ್ಷ ಸ್ಥಾನ ಸಾಮಾನ್ಯವಾಗಿರುವದರಿಂದ ಕಾಂಗ್ರೇಸ್ ನಲ್ಲಿ ವಾರ್ಡ ನಂ ೧೧ ವೈ ಭೂಪನಗೌಡ, ವಾರ್ಡ ನಂ ೩ ಹಸೇನ ಅಲಿ ಸಾಬ್, ವಾರ್ಡ ನಂ ೪ ಅಮರಮ್ಮ , ವಾರ್ಡ. ನಂ ೧೨ ಅಮರಮ್ಮ, ವಾರ್ಡ ನಂ ೬ ಹಾಜಿಚೌದ್ರ, ವಾರ್ಡ ನಂ ೯ ರ ಸೂರಿ ದುರುಗಣ್ಣ ನಾಯಕ ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅವರಲ್ಲಿ ವೈ ಭೂಪನಗೌಡ, ಅಮರಮ್ಮ , ಅಮರಮ್ಮ ತೀರ್ವ ಸ್ಪರ್ದೆ ಇದೆ. ಸಚಿವರು, ಶಾಸಕರು, ಸ್ಥಳಿಯ ಮುಖಂಡರ ಒಲವು ಯಾರ ಕಡೆ ಎಂಬುದು ಕಾದು ನೋಡಬೇಕಾಗಿದೆ. ಬಿಜೆಪಿಯಲ್ಲಿ ಸಂದೀಪ್ ಪಾಟೀಲ್, ಹನುಮಂತಿ ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೇಸ್ ಸದಸ್ಯರಿಗೆ ಸದಸ್ಯರೆ ಮುಳ್ಳು :- ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಕಾಂಗ್ರೇಸ್ ಸದಸ್ಯರೆ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!