ಉದಯವಾಹಿನಿ, ಕೋಲಾರ: ದೇಶಭಕ್ತಿ ಮತ್ತು ರಾಷ್ಟ್ರಭಕ್ತಿದ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನು ಗೌರವಿಸುವುದು, ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಜಿಲ್ಲಾ ಭಾರತ ಸೇವಾದಳ ಸಂಘಟಕ ಎಂ ಬಿ ದಾನೇಶ್ ತಿಳಿಸಿದರು
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ರಾಷ್ಟ್ರ ಧ್ವಜ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ರಾಷ ಲಾಂಛನಗಳು ದೇಶದ ಸಂಕೇತಗಳಾಗಿದ್ದು ಇದನ್ನು ಗೌರವಿಸುವುದು ಮತ್ತು ಈ ಬಗ್ಗೆ ವಿವರಗಳನ್ನು ಅರಿವುವುದು ಪ್ರತಿಯೊಬ್ಬರಿಂದಲೂ ಆಗಬೇಕು. ರಾಷಗೀತೆಯನ್ನು ಹಾಡುವುದು ಮತ್ತು ಅದರ ಮಹತ್ವವನ್ನು ಅರಿಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ರಾಷ್ರಧ್ವಜ ಜೊತೆಗೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದರು
ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್ ಮಾತನಾಡಿ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ರಾಷ್ಟ್ರೀಯ ನಾಯಕರಿಗೆ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು ಆಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಯುವ ಜನಾಂಗ ರಾಷ್ಟ್ರೀಯ ಸೌಹಾರ್ದತೆಯನ್ನು ಕಾಪಾಡಿದಂತಾಗುತ್ತದೆ ಎಂದರು
ಗ್ರಾಮ ಪಂಚಾಯಿತಿಯ ಮಂಗಮ್ಮ ರವರು ಮಾತನಾಡಿ ವಿದ್ಯಾರ್ಥಿಗಳ ಹಾದಿಯಾಗಿ ಭಾರತದ ಪ್ರತಿಯೊಬ್ಬರೂ ರಾಷ್ಟ್ರೀಯ ಮೌಲ್ಯಗಳಿಗೆ ಗೌರವ ನೀಡಬೇಕು. ರಾಷ ಲಾಂಛನಗಳನ್ನು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ವಿದ್ಯಾರ್ಥಿ ನಾಯಕತ್ವದ ಬಗ್ಗೆ ಶಿಕ್ಷಕರಾದ ಎಂ ಆರ್ ಮೀನಾ , ಕೆ ಮಮತಾ ವಿವರಿಸಿದರಲ್ಲದೆ ಶಾಲಾ ಸಂಸತ್ತಿನಲ್ಲಿರುವ ಅಧಿಕಾರ ಅಧಿಕಾರದ ವ್ಯಾಪ್ತಿ ವಿವರಿಸಿ ಸಂವಿಧಾನವನ್ನು ಗೌರವಿಸುವುದ ಅಲ್ಲದೆ, ರಾಷ್ಟ್ರೀಯ ಲಾಂಛನಗಳನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
