ಉದಯವಾಹಿನಿ, ನ್ಯೂಯಾರ್ಕ್: ಟ್ರಂಪ್ ಮತ್ತು ಎಲೋನ್ ಮಸ್ಕ್ ರಾಪ್ ಹಾಡಿಗೆ ನಡುಬೀದಿಯಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿದ್ದಾರೆ. ಎಲೋನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಹೆಚ್ಚಾದಂತೆ ಅಸಾಧ್ಯವಾದುದನ್ನೂ ಸಾಧ್ಯ ಮಾಡಲಾಗುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ, ಪ್ರಸ್ತುತ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಖ್ಯಾತ ಟೆಕ್ ದಿಗ್ಗಜ ಎಲಾನ್ ಮಸ್ಕ್ ಹಾದಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಜನಪ್ರಿಯ ಪಾಪ್ ಮ್ಯೂಸಿಕ್ ಬ್ಯಾಂಡ್ ಬೀ ಗೀಸ್ ನ ಸ್ಟೇಯಿನ್ ಅಲೈವ್ ರಾಪ್ ಹಾಡಿಗೆ ನೃತ್ಯ ಮಾಡುವ ಮೂಲಕ ಅವರು ನೆಟಿಜನ್‌ಗಳ ಹೃದಯವನ್ನು ಕದ್ದಿದ್ದಾರೆ.

ಈ ವೀಡಿಯೊದಲ್ಲಿ, ಎಲೋನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರೂ ಸೂಟು- ಬೂಟು ಧರಿಸಿ ಮೈಕೆಲ್ ಜಾಕ್ಸನ್ ನಂತೆ ನೃತ್ಯ ಮಾಡುತ್ತಿದ್ದಾರೆ.ಇಂದು ಹೇಗೆ ಸಾಧ್ಯ ಎಂದು ನೀವು ಭಾವಿಸುತ್ತೀರಾ? ಎಐ ಯಿಂದ ಏನು ಬೇಕಾದರೂ ಸಾಧ್ಯ. ಈ ಇಬ್ಬರು ಡ್ಯಾನ್ಸ್ ಮಾಡಿರುವ ಎಐ ವಿಡಿಯೋವನ್ನು ಎಲಾನ್ ಮಸ್ಕ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಡ್ಯಾನ್ಸ್ ಹೇಗಿದೆ ಎಂದು ತಮ್ಮ ಹಿಂಬಾಲಕರನ್ನು ತಮಾಷೆಯಾಗಿ ಕೇಳಿದ್ದಾರೆ .ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಏಕಕಾಲಕ್ಕೆ ೬.೫ ಕೋಟಿ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ೩.೫ ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರನ್ನು ಚುನಾವಣಾ ಪ್ರಚಾರಕ್ಕಾಗಿ ಎಲೋನ್ ಮಸ್ಕ್ ಸಂದರ್ಶಿಸಿದ್ದಾರೆ .ಈ ಸಂದರ್ಶನದ ಹಿನ್ನೆಲೆಯಲ್ಲಿ ಇತ್ತೀಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Leave a Reply

Your email address will not be published. Required fields are marked *

error: Content is protected !!