ಉದಯವಾಹಿನಿ, ಹುಬ್ಬಳ್ಳಿ : ಭಾರತವು ಸ್ವಾತಂತ್ರ್ಯ ಪಡೆದು 77 ವರ್ಷಗಳು ಗತಿಸಿದವು, ಇದಕ್ಕಾಗಿ ಅನೇಕ ಭಾರತೀಯರು ಹೋರಾಟಗಾರರು ತಮ್ಮ ಪ್ರಾಣ ಬಲಿದಾನ ನೀಡಿದ್ದಾರೆ, ಹಾಗಾಗಿ ಇಂದಿನ ದಿನವನ್ನು ಅವರ ಸ್ಮರಣೆಗೋಸ್ಕರ ಇಂದಿನ ದಿನವನ್ನು ಸ್ವಾತಂತ್ರೋತ್ಸವದ ದಿನಾಚರಣೆಯನ್ನಾಗಿ ಆಚರಿಸುತಿದ್ದೇವೆ, ನಮ್ಮ ಕೊಡುಗೆ ದೇಶಕ್ಕಾಗಿ ಏನು ಎಂದು ಅರಿತುಕೊಂಡು ಸತತವಾಗಿ ದೇಶಕ್ಕೋಸ್ಕರ ಪರಿಶ್ರಮ ಪಡುತ್ತಾ, ಪ್ರಭುತ್ವಮಟ್ಟದ ರಾಷ್ಟ್ರ ನಿರ್ಮಿಸಬೇಕು ಎಂದು ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಆ?ಯಂಡ್ ಡೆವಲಪಮೆಂಟ್ ಟ್ರಸ್ಟ್ ಸಂಸ್ಥಾಪಕ ಡಾ ಶರಣಪ್ಪ ಎಂ ಕೊಟಗಿ ಕರೆ ನೀಡಿದರು.
ಸತ್ತೂರಿನಲ್ಲಿನ ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಆಂಡ್ ಡೆವಲಪಮೆಂಟ್ ಟ್ರಸ್ಟ್‍ನ ಕಾಲೇಜ ಆವರಣದಲ್ಲಿಂದು 78ನೇ ಸ್ವಾತಂತ್ರೋತ್ಸವದ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಗರಾಜ್ ಎಸ್ ಕೊಟಗಿ ಅವರು ಮಾತನಾಡಿ, ದೇಶದ ಯುವಕರೇ ಭವಿಷ್ಯದ ಹಾಗೂ ಇಂದಿನ ಶಕ್ತಿಯಾಗಿದ್ದಾರೆ ಎಂದರು. ಟ್ರಸ್ಟಿ ಭಾರತಿ ಎಸ್ ಕೂಟಗಿ. ಮೃತ್ಯುಂಜಯ ಎಸ್ ಕೊಟಗಿ, ಪ್ರಾಚಾರ್ಯ ನವೀನ್ ಕರೆರ್, ಪ್ರಾಧ್ಯಾಪಕ ಬುಡ್ಡನವರ, ವಾಗಿಶ ಹಿರೇಮಠ, ನವೀನ ಕೊರಡೂರ್, ಮಂಗಳ ಹಿರೇಮಠ, ಅಪರ್ಣ ಅಗಡಿ, ಶಿರಿನ್ ಹತ್ತಿಮತ್ತೂರ್, ಹೊಮಿಯೋಪಾತಿಕ್ ಕಾಲೇಜಿನ ಆಡಳಿತಧಿಕಾರಿ ಡಾ ಕಿರಣ ಸಾಣಿಕೊಪ್ಪ, ಪ್ರಾಧ್ಯಾಪಕರಾದ ಡಾ ಪ್ರದೀಪ ಕಮ್ಮಾರ, ಡಾ ಸಾಧನ ಚೌಗಲಾ, ಡಾ ಸೋಹನ್, ಡಾ ವಾಸಿಮ್, ಡಾ ಮಂಜುಳಾ, ಪಿಯುಸಿ ಕಾಲೇಜಿನ ಪ್ರಾಚಾರ್ಯ ಉಮೇಶ್, ರೂರಲ್ ಬಿ.ಇಡಿ ಕಾಲೇಜಿನ ಪ್ರಾÀ?ರಧ್ಯಾಪಕ ರಂಗಪ್ಪ ದಸರಾ, ಪದವಿ ಕಾಲೇಜಿನ ಉಪನ್ಯಾಸಕರಾದ ಪ್ರವೀಣ ಪೂಜಾರ, ಕರುಣಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.
