ಉದಯವಾಹಿನಿ,  ಲಕ್ಷ್ಮೇಶ್ವರ : ಸಮೀಪದ ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಲವಿಗಿಯ ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ ಎರಡು ಬಸ್ಸುಗಳ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ ಅನೇಕರು ಗಾಯಗೊಂಡ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಬೆಂಗಳೂರಿನಿಂದ ಗದಗಿಗೆ ಹೊರಟಿದ್ದ ಬಸ್ಸು ಮತ್ತು ರೋಣ ಡಿಪೋಕ್ಕೆ ಸೇರಿದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸುಗಳ ಮಧ್ಯ ಅಂಡರ್ ಬ್ರಿಡ್ಜಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಪಿಎಸ್‍ಐ ಈರಣ್ಣ ರಿತ್ತಿ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡ ಪ್ರಯಾಣಿಕರನ್ನು ಸವಣೂರು ಆಸ್ಪತ್ರೆಗೆ ರವಾನಿಸುವಲ್ಲಿ ನೆರವಾದರು.

Leave a Reply

Your email address will not be published. Required fields are marked *

error: Content is protected !!