ಉದಯವಾಹಿನಿ, ಬಳ್ಳಾರಿ: ನಗರದ ಶುಭ ಮಸ್ತು ಒಕ್ಕೂಟದಿಂದ ವರಮಹಾಲಕ್ಷ್ಮಿ ಪೂಜೆ ಅಂಗವಾಗಿದ್ದು ಸಿದ್ದ ತಿನಿಸುಗಳಾದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಸೇರಿದಂತೆ ವಿವಿಧ ತರಕಾರಿ ಪಲ್ಯಗಳು, ಚಟ್ನಿ ಪುಡಿಗಳು, ಸಿಹಿ ತಿಂಡಿಗಳು ಮಾರಾಟ ಮತ್ತು ಪ್ರದರ್ಶನಕ್ಕೆ ಮೇಯರ್ ನಂದೀಶ್ ಚಾಲನೆ ನೀಡಿದರು. ಈ ವೇಳೆ ಪಾಲಿಕೆ ಸದಸ್ಯ ಕೆ. ಹನುಮಂತಪ್ಪ ಸುಭಾನ್ ಅಲ್ಲ ಸ್ವಸಹಾಯ ಸಂಘ ಮಹಿಳೆಯರು ಎಲ್ಲಾ ರಂಗದಲ್ಲಿ ಮುಂದೆ ಇದ್ದಾರೆ. ನಾವು ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದರು. ಶುಭ ಮಸ್ತು ಪ್ರದೇಶ ಮಟ್ಟದ ಒಕ್ಕೂಟ ಅಧ್ಯಕ್ಷೆ ಸುಮಾ ರೆಡ್ಡಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು
