ಉದಯವಾಹಿನಿ, ಬೆಂಗಳೂರು:  ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ಕಾನೂನಾತಕವಾಗಿ ಹಾಗೂ ರಾಜಕೀಯವಾಗಿ ಎದುರಿಸುವ ಜೊತೆಗೆ ನಮ ಪಾಡಿಗೆ ನಾವು ಆಡಳಿತ ನಡೆಸಿದ್ದೇವೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಕಚೇರಿ ದುರ್ಬಳಕೆ ಯಾಗುತ್ತಿದೆ.
ಕಾನೂನು ಹೋರಾಟ ನಡೆಸುವುದರ ಜೊತೆಗೆ ರಾಜಕೀಯವಾಗಿಯೂ ತಕ್ಕ ಉತ್ತರ ನೀಡುತ್ತೇವೆ. ನಾಳೆಯಿಂದ ನಮ ಪಕ್ಷದ ಕಾರ್ಯಕರ್ತರು ಬೀದಿಗಿಳಿಯಲಿದ್ದಾರೆ. ಈ ಬಗ್ಗೆ ಈಗಾಗಲೇ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಪ್ರತಿಭಟನೆ ವೇಳೆ ಕಲ್ಲುತೂರಾಟ ಸೇರಿದಂತೆ ಯಾವುದೇ ಹಿಂಸಾತಕ ಕೃತ್ಯಗಳನ್ನು ನಡೆಸದೆ ಶಾಂತಿಯುತ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಬಿಜೆಪಿಯವರು ಪ್ರತಿಭಟನೆ ಮಾಡಲಿ. ಅದು ಅವರ ಹಕ್ಕು. ನಾವು ನಮ ಹಕ್ಕನ್ನು ಪ್ರತಿಪಾದಿಸುತ್ತೇವೆ. ರಾಜ್ಯಪಾಲರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸಿರುವುದು, ಮುಖ್ಯಮಂತ್ರಿಯವರನ್ನು ಗುರಿಯಾಗಿಸಿ ಸರ್ಕಾರವನ್ನೇ ಪತನಗೊಳಿಸುವ ಸಂಚು ನಡೆದಿರುವುದು ಕಣ್ಣೆದುರಿಗೆ ಇದೆ ಎಂದರು.

ಬಿಜೆಪಿಯೇತರ ಆಡಳಿತ ಇರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾಜ್ಯಪಾಲರ ವರ್ತನೆಗಳು ಆಕ್ಷೇಪಾರ್ಹ. ಈಗ ಕರ್ನಾಟಕದಲ್ಲೂ ಅಂಥದ್ದೇ ಪ್ರಯತ್ನ ನಡೆಯುತ್ತಿದೆ. ಇದರ ಕುರಿತಂತೆ ರಾಷ್ಟ್ರಮಟ್ಟದಲ್ಲಿಹೋರಾಟ ನಡೆಸುವ ಬಗ್ಗೆ ಹೈಕಮಾಂಡ್ ನಾಯಕರು ಇಂಡಿಯ ಮೈತ್ರಿಕೂಟದ ಸದಸ್ಯರ ಜೊತೆ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಶಾಸಕ ಜನಾದರ್ನ ರೆಡ್ಡಿ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವಂತೆ ಮನವಿಗಳು ಬಾಕಿ ಇದ್ದರೂ ರಾಜ್ಯಪಾಲರು ಅವನ್ನು ಬದಿಗಿರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನುಮತಿ ನೀಡಿರುವುದು ಮೇಲ್ನೋಟಕ್ಕೆ ದುರುದ್ದೇಶಪೂರಿತವಾಗಿದೆ. ನಮಗೆ ಈ ನಾಲ್ವರ ವಿರುದ್ಧ ಅರ್ಜಿಗಳು ಬಾಕಿ ಇರುವುದು ಗೊತ್ತಿತ್ತು. ದ್ವೇಷದ ರಾಜಕೀಯ ಬೇಡ ಎಂದು ಸುಮನಿದ್ದೆವು ಎಂದು ಮುಗುಮಾಗಿ ಹೇಳಿದರು.

 

Leave a Reply

Your email address will not be published. Required fields are marked *

error: Content is protected !!