ಉದಯವಾಹಿನಿ, ಬೆಂಗಳೂರು: ಮೈಸೂರು ಸಿಲ್ಕ್ ಸೀರೆಗಳು ಎಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಪ್ರತಿಶನಿವಾರ ಕೆಎಸ್‌ಐಸಿ ಮಾರಾಟ ಮಳಿಗೆಗಳನ್ನು ತೆರೆಯುವ ಮುನ್ನವೇ ನೂರಾರು ಮಂದಿ ಕಾದು ಕುಳಿತಿದ್ದು, ಅಂಗಡಿ ತೆರೆಯುತ್ತಿದ್ದಂತೆ ಕೆಲವೇ ಗಂಟೆಗಳಲ್ಲಿ ಸೀರೆಗಳನ್ನು ಪೈಪೋಟಿಗೆ ಬಿದ್ದು ಖರೀದಿ ಮಾಡುತ್ತಿದ್ದಾರೆ. ಗ್ರಾಹಕರ ಬೇಡಿಕೆಯನ್ನು ಈಡೇರಿಸಲಾಗದೆ ಕೆಎಸ್‌ಐಸಿ ದಿನನಿತ್ಯ ಪರದಾಡುತ್ತಿದೆ.
ವಿಶ್ವವಿಖ್ಯಾತ ಮೈಸೂರು ಸಿಲ್‌್ಕ ಸೀರೆಗೆ ಇನ್ನಿಲ್ಲದ ಬೇಡಿಕೆ ಇದೆ. ಮಾರ್ಡನ್ ಸ್ಟೈಲ್ ಉಡುಪುಗಳನ್ನು ಧರಿಸುವವರು ಕೂಡ ಕೆಎಸ್‌ಐಸಿ ಬ್ರಾಂಡ್ ನ ಸೀರೆಗಳನ್ನು ಉಡಲು ಖುಷಿ ಪಡುತ್ತಾರೆ. ಇವು ಗುಂಪಿನಲ್ಲೂ ಭಿನ್ನ ಆಕರ್ಷಣೆಯನ್ನು ತಂದುಕೊಡುತ್ತವೆ. ಸತತವಾಗಿ ಏಳನೇ ಬಾರಿ ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅಂದು ಮೈಸೂರು ಸಿಲ್‌್ಕ ಸೀರೆ ಧರಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಸ್ವಾತಂತ್ರ್ಯ ಪೂರ್ವದ 1912ರಲ್ಲಿ ಆಗಿನ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಿಲ್‌್ಕ ಉದ್ಯಮವನ್ನು ಆರಂಭಿಸಿದರು. ಮೈಸೂರು ಮಹಾರಾಜರು ಸ್ಥಾಪಿಸಿದ ಕರ್ನಾಟಕ ಸೋಪ್‌್ಸ ಅಂಡ್ ಡಿಟರ್ಜಂಟ್ (ಕೆಎಸ್‌ಡಿಸಿಎಲ್) ಸೇರಿ ಅನೇಕ ಉದ್ಯಮಗಳು ಈಗಲೂ ಲಾಭದಾಯಕವಾಗಿ ನಡೆಯುತ್ತಿರುವುದಲ್ಲದೆ ಜಾಗತಿಕ ಮನ್ನಣೆ ಪಡೆದಿವೆ. ಮೈಸೂರು ಸಿಲ್‌್ಕಗೆ ದೇಶಿಯವಾಗಿ ಅಷ್ಟೆ ಅಲ್ಲ ಅಮೇರಿಕಾ, ಆಸ್ಟ್ರೇಲಿಯದಂತಹ ದೇಶಗಳಿಂದಲೂ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಕೆಯಾಗುತ್ತಿದೆ. ಕರ್ನಾಟಕ ರೇಷೆ ಉದ್ಯಮಗಳ ನಿಗಮ ನಿಯಮಿತ ಬೆಂಗಳೂರಿನ ಎಂ.ಜಿ.ರಸ್ತೆಯ ಜುಬಿಲಿ ಶೋರೂಂ, ಬಸವೇಶ್ವರ ನಗರ, ಜಯನಗರ, ಕೆ.ಜಿ.ರಸ್ತೆ, ಗಾಂಧಿ ಬಜಾರ್, ಡಿ.ವಿ.ಜಿ.ರಸ್ತೆ, ಮಲ್ಲೇಶ್ವರಂ, ಮೈಸೂರಿನ ಯಾತ್ರಿ ನಿವಾಸ್, ಕೆ.ಆರ್.ವೃತ್ತ, ಮೃಗಾಲಯದ ಪಕ್ಕ, ಫ್ಯಾಕ್ಟರಿ ಶೋರೂಂ, ಚೆನ್ನಪಟ್ಟಣ, ದಾವಣಗೆರೆ, ಚೆನೈ, ಹೈದರಾಬಾದ್ ಸೇರಿ 17 ಮಾರಾಟ ಮಳಿಗೆಗಳನ್ನು ಹೊಂದಿದೆ. ಕಾಲ ಕಾಲಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ತಾತ್ಕಾಲಿಕ ಪ್ರದರ್ಶನ ಹಾಗೂ ಮಾರಾಟ ಮೇಳಗಳನ್ನು ಆಯೋಜನೆ ಮಾಡುತ್ತಿದೆ. ಆನ್‌ಲೈನ್ ಖರೀದಿಗೂ ಅವಕಾಶ ಕಲ್ಪಿಸಿದೆ. ಪಾರಂಪರಿಕ ಮೈಸೂರು ಸಿಲ್‌್ಕಗೆ ಸದಾ ಕಾಲ ಬೇಡಿಕೆ ಇದ್ದೇ ಇದೆ. 1962ರಲ್ಲಿ ನಮ ಅಜ್ಜಿ ಸೀರೆ ಖರೀದಿ ಮಾಡಿದ್ದರು ಅದನ್ನೂ ಈಗಲೂ ಇಟ್ಟಿದ್ದೇವೆ. ನಾನು ಖರೀದಿ ಮಾಡುತ್ತಿದ್ದೇನೆ, ನನ್ನ ಮಗಳು ಸಾಫ್ಟವೇರ್ ಇಂಜಿನಿಯರ್ ಆಕೆಯೂ ಕೆಎಸ್‌ಐಸಿಯ ಮೈಸೂರು ಸಿಲ್‌್ಕ ಸೀರೆಗಳನ್ನು ಖರೀದಿಸಿ, ಬಳಕೆ ಮಾಡುತ್ತಾರೆ ಎಂದು ಗ್ರಾಹಕ ಮಹಿಳೆಯೊಬ್ಬರು ಹೆಮೆಯಿಂದ ಹೇಳುತ್ತಾರೆ.
