ಉದಯವಾಹಿನಿ, ಚನ್ನಮ್ಮನ ಕಿತ್ತೂರು : ಗ್ರಾಮಗಳಲ್ಲಿ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸುವುದು ಗ್ರಾಪಂ ಮತ್ತು ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಸಮಿತಿಗಳ ಹೊಣೆಯಾಗಿದೆಯೆಂದು ಪ್ರಭಾರಿ ತಾಪಂ ಇಓ ಕಿರಣ ಗೋರ್ಪಡೆ ಹೇಳಿದರು.
ತಾಪಂ ಸಭಾಭವನದಲ್ಲಿ ಶುದ್ಧ ಕುಡಿಯುವ ನೀಡಿನ ಪರೀಕ್ಷೆ ಕುರಿತು ಸಭೆಯ ಅಧ್ಯಕ್ಷತೆವಹಿಸಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಅವರು ಯಾವುದೇ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಖಡಕ್ ಆದೇಶ ನೀಡಿದರು.
ಸಾರ್ವಜನಿಕರಿಗೆ ಶುದ್ಧ ನೀರು ಸರಬರಾಜು ಮಾಡುವುದು ವಾಟರಮನ್‍ಗಳ ಜೊತೆಗೂಡಿ ಕಾರ್ಯನಿರ್ವಹಿಸುವುದು ಗ್ರಾಪಂ ಸಿಬ್ಬಂದಿ ಜವಾಬ್ದಾರಿಯಾಗಿದೆ. ಪೈಪಲೈನ್ ಒಡೆದು ಹಾಳಾದರೆ ಮಳೆ ನೀರು ಮಿಶ್ರಣವಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ತಕ್ಷಣವೇ ಸರಿಪಡಿಸಬೇಕು. ಆಕೆಲಸವಾಗದಿದ್ದರೆ ಅಂತವರ ಮೇಲೆ ನಿರ್ಧಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮಗಳಲ್ಲಿ ನೀರಿನ ಟ್ಯಾಂಕರ್ ಆಗಾಗ ಸ್ವಚ್ಛಗೊಳಿಸಬೇಕು. ಅದಲ್ಲದೇ ಇದೀಗ ವಿತರಿಸುವ ಎಫ್‍ಟಿಕೆ ಕಿಟ್‍ಗಳ ಮೂಲಕ ನೀರು ಪರೀಕ್ಷಿಸಿ ತಾಪಂಗೆ ವರದಿ ಸಲ್ಲಿಸಬೇಕು.
ಇದಕ್ಕೂ ಪೂರ್ವ ಎಲ್ಲ ವಾಟರಮನ್‍ಗಳಿಗೆ ಎಫ್‍ಟಿಕೆ ಕಿಟ್ ಮೂಲಕ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಿಸುವ ಬಗ್ಗೆ ಪ್ರಾತ್ಯಕ್ಷೀಕೆ ನೀಡಲಾಯಿತು. ಸಹಾಯಕ ನಿರ್ದೇಶಕ ಸುರೇಶ ನಾಗೋಜಿ, ವಿವೇಕ ಕೊನ್ನೂರು, ಜಿಲ್ಲಾ ನೀರು ಪ್ರಯೋಗಾಲಯದ ಸಿಬ್ಬಂದಿ ಹಾಗೂ ತಾಪಂ ಸಿಬ್ಬಂದಿ, ವಾಟರಮನ್‍ಗಳು ಸೇರಿದಂತೆ ಪಿಡಿಓಗಳಿದ್ದರು.
