ಉದಯವಾಹಿನಿ, ಮಂಡ್ಯ : ಮನೆಯಲ್ಲಿ ಪತ್ನಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿ ಕೊಂಡಿದ್ದಕ್ಕೆ ಹೆದರಿದ ಪತಿಯೂ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಗದ್ದೆ ಹೊಸೂರು ನಿವಾಸಿ ಸ್ವಾತಿ(22) ಆತಹತ್ಯೆಗೆ ಶರಣಾದ ಗೃಹಿಣಿ ಹಾಗೂ ಮೋಹನ್(26) ಹೊಸೂರು ಕೆರೆಗೆ ಹಾರಿ ಸಾವನ್ನಪ್ಪಿರುವ ಪತಿ.
ಎರಡು ವರ್ಷದ ಹಿಂದೆಯಷ್ಟೇ ಸ್ವಾತಿ ಅವರು ರೈತ ಮೋಹನ್ ಅವರನ್ನು ವಿವಾಹವಾಗಿದ್ದು ಇವರಿಗೆ ಒಂದೂವರೆ ವರ್ಷದ ಮಗುವಿದೆ. ಕೆಲ ತಿಂಗಳುಗಳಿಂದ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯು ತ್ತಿತ್ತು ಎನ್ನಲಾಗಿದೆ. ಮೋಹನ್ ಮನೆಯವರು ಕಿರುಕುಳ ನೀಡುತ್ತಿದ್ದಾ ರೆಂದು ಸ್ವಾತಿ ತನ್ನ ಪೋಷಕರಿಗೆ ಹೇಳಿಕೊಂಡಿದ್ದಳು. ಹಾಗಾಗಿ ಹಿರಿಯರೆಲ್ಲ ಸೇರಿ ರಾಜಿಪಂಚಾಯ್ತಿ ಮಾಡಿ ಜೀವನ ನಡೆಸಿಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು.

ಈ ನಡುವೆ ರಾತ್ರಿ ಸ್ವಾತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಸ್ವಾತಿ ಮನೆಯವರು ಗದ್ದೆ ಹೊಸೂರಿಗೆ ದೌಡಾಯಿಸಿ ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಮನೆಗೆ ಬೆಂಕಿ ಹಚ್ಚಿದ್ದಾರೆ.
ಪತಿ ಮೋಹನ್ ಹಾಗೂ ಆತನ ಪೋಷಕರು ನಾಪತ್ತೆಯಾಗಿದ್ದರು. ಪತ್ನಿ ಆತಹತ್ಯೆ ಮಾಡಿಕೊಂಡಿರುವುದರಿಂದ ಪೋಲೀಸರು ನನ್ನನ್ನು ಬಂಧಿಸುತ್ತಾರೆ ಎಂದು ಹೆದರಿದ ಮೋಹನ್ ರಾತ್ರಿಯೇ ಹೊಸೂರು ಕೆರೆಗೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ವಿಚಾರ ಯಾರ ಗಮನಕ್ಕೂ ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಿಕ್ಕೇರಿ ಠಾಣೆ ಪೊಲೀಸರು ಸ್ವಾತಿ ಕುಟುಂಬದವರನ್ನು ಸಮಾಧಾನಪಡಿಸಿ ಮೋಹನ್ ಕುಟುಂಬದವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಇಂದು ಬೆಳಗ್ಗೆ ಮೋಹನ್ ಶವ ಹೊಸೂರು ಕೆರೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಕೆರೆ ಬಳಿ ಹೋಗಿ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ಅಪ್ಪ-ಅಮನ ಸಾವಿನಿಂದಾಗಿ ಒಂದೂವರೆ ವರ್ಷದ ಮಗು ಅನಾಥವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

 

Leave a Reply

Your email address will not be published. Required fields are marked *

error: Content is protected !!